ಭಾನುವಾರ, ಮಾರ್ಚ್ 7, 2021
27 °C

ಒಲಿಂಪಿಕ್ಸ್‌: ಅಮೆರಿಕಕ್ಕೆ ಮೊದಲ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್‌: ಅಮೆರಿಕಕ್ಕೆ ಮೊದಲ ಚಿನ್ನ

ಸೋಚಿ (ಎಎಫ್‌ಪಿ): ಅಮೆರಿಕದ ಸೇಜ್‌ ಕೊಸೆನ್‌ಬರ್ಗ್‌ ಇಲ್ಲಿ ನಡೆಯುತ್ತಿರುವ ಸೋಚಿ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನವನ್ನು ಗೆದ್ದುಕೊಂಡರು.ಶನಿವಾರ ನಡೆದ ‘ಸ್ಲೋಪ್ ಸ್ಟ್ಲೈಲ್‌ ಸ್ನೋ ಬೋರ್ಡಿಂಗ್‌’ ಸ್ಪರ್ಧೆಯಲ್ಲಿ ಕೊಸೆನ್‌ಬರ್ಗ್‌ ಈ ಸಾಧನೆ ಮಾಡಿದರು. ಈ ಸಲದ ಒಲಿಂಪಿಕ್ಸ್‌ನಲ್ಲಿ ಬಂದ ಮೊದಲ ಬಂಗಾರ ಇದಾಗಿದೆ.38ನೇ ಸ್ಥಾನ: ‘ಲ್ಯೂಜ್‌’ ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಹೀಟ್‌ನಲ್ಲಿ ಭಾರತದ ಶಿವಕೇಶವನ್‌ 38ನೇ ಸ್ಥಾನಕ್ಕೆ ಪಡೆದರು.ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಅಥ್ಲೀಟ್‌ ಎನಿಸಿದ್ದಾರೆ. ಅವರು ಈ ಮೊದಲು ನಾಲ್ಕು ಸಲ ಚಳಿಗಾಲದ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವಿಭಾಗದಲ್ಲಿ ಒಟ್ಟು ನಾಲ್ಕು ‘ಹೀಟ್ಸ್‌’ ನಡೆಯಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.