ಶುಕ್ರವಾರ, ಮೇ 27, 2022
29 °C

ಒಲಿಂಪಿಕ್ಸ್ : ಇನ್ನು 29 ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಮಾಜಿ ನಾಯಕ ಧನರಾಜ್ ಪಿಳ್ಳೈ ಅಭಿಪ್ರಾಯ

`ಮೊದಲ ಪಂದ್ಯ ಪ್ರಮುಖವಾದುದು~


ಮುಂಬೈ (ಪಿಟಿಐ): ಲಂಡನ್  ಒಲಿಂಪಿಕ್ಸ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡಕ್ಕೆ ಮೊದಲ ಪಂದ್ಯ ಪ್ರಮುಖವಾದುದು ಎಂದು ಮಾಜಿ ನಾಯಕ ಧನರಾಜ್ ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.`ನಾನು ನಾಲ್ಕು ಒಲಿಂಪಿಕ್ಸ್‌ನಲ್ಲಿ ಆಡಿದ್ದೇನೆ. ಒಮ್ಮೆ ಹೊರತುಪಡಿಸಿ ಉಳಿದೆಲ್ಲಾ ಬಾರಿ ಮೊದಲ ಪಂದ್ಯದಲ್ಲಿಯೇ ಸೋಲು ಕಂಡಿದ್ದೆವು. ಉತ್ತಮ ಪ್ರದರ್ಶನ ನೀಡುವ ದೃಷ್ಟಿಯಿಂದ ಮೊದಲ ಪಂದ್ಯದಲ್ಲಿ ಗೆಲ್ಲಬೇಕು~ ಎಂದು ಸೆಂಟರ್ ಫಾರ್ವರ್ಡ್ ಖ್ಯಾತಿಯ ಧನರಾಜ್ ಹೇಳಿದ್ದಾರೆ.1992ರ ಬಾರ್ಸಿಲೋನಾ ಒಲಿಂ ಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭಾರತ 0-3ರಲ್ಲಿ ಜರ್ಮನಿಯ ವಿರುದ್ಧ ಸೋಲು ಕಂಡಿತ್ತು. ಆ ಕೂಟದಲ್ಲಿ ಭಾರತ ಏಳನೇ ಸ್ಥಾನ ಪಡೆದಿತ್ತು. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕೂಡ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಪರಾಭವಗೊಂಡಿದ್ದ ಈ ತಂಡದವರು ಎಂಟನೇ ಸ್ಥಾನ ಗಳಿಸಿದ್ದರು.ಆದರೆ 2000ರಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಪಂದ್ಯದಲ್ಲಿ ಗೆದ್ದಿತ್ತು. 3-0ರಲ್ಲಿ ಅರ್ಜೆಂಟೀನಾ ವಿರುದ್ಧ ಜಯ ಗಳಿಸಿದ್ದ ಈ ತಂಡದವರು ಆ ಕೂಟದಲ್ಲಿ ಏಳನೇ ಸ್ಥಾನ ಪಡೆದಿದ್ದರು. 2004ರ ಅಥೆನ್ಸ್ ಕೂಟದ ತಮ್ಮ ಮೊದಲ ಪಂದ್ಯದಲ್ಲಿ ಭಾರತ 1-3 ಗೋಲುಗಳಿಂದ ಜರ್ಮನಿಗೆ ಶರಣಾಗಿತ್ತು. ಅದರಲ್ಲೂ ಏಳನೇ ಸ್ಥಾನ ಗಳಿಸಿದ್ದರು.ಭರತ್ ಚೆಟ್ರಿ ಸಾರಥ್ಯದ ಭಾರತ ಲಂಡನ್ ಒಲಿಂಪಿಕ್ಸ್‌ನ ತನ್ನ ಮೊದಲ ಪಂದ್ಯದಲ್ಲಿ ಹಾಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜುಲೈ 30ರಂದು ನಡೆಯಲಿದೆ. ಭಾರತ ತಂಡ `ಬಿ~ ಗುಂಪಿನಲ್ಲಿದ್ದು ಇದರಲ್ಲಿ ಜರ್ಮನಿ (1992 ಮತ್ತು 2008ರಲ್ಲಿ ಚಿನ್ನ), ಹಾಲೆಂಡ್ (1996 ಮತ್ತು 2000ರಲ್ಲಿ ಚಿನ್ನ), ಕೊರಿಯಾ, ನ್ಯೂಜಿಲೆಂಡ್ ಹಾಗೂ ಬೆಲ್ಜಿಯಂ ತಂಡಗಳಿವೆ.`ಭಾರತ ತಂಡದವರು ಹೊಸದಾಗಿ ಅಳವಡಿಸಲಾಗಿರುವ ನೀಲಿ ಟರ್ಫ್‌ಗೆ ಬೇಗ ಹೊಂದಿಕೊಳ್ಳಬೇಕು. ಈ ಒಲಿಂಪಿಕ್ಸ್‌ನಲ್ಲಿ ಭಾರತ ಅಗ್ರ ಆರರೊಳಗೆ ಸ್ಥಾನ ಪಡೆಯಬೇಕು ಎಂಬುದು ನನ್ನ ನಿರೀಕ್ಷೆ. ಹಾಗಾದಲ್ಲಿ ಅದು ಖುಷಿಯ ವಿಚಾರ~ ಎಂದಿದ್ದಾರೆ.ಟೆನಿಸ್‌ನಲ್ಲಿ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಪಿಳ್ಳೈ, `ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರು ವಿವಾದವನ್ನು ಬದಿಗಿಟ್ಟು ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನ್ನದು~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.