ಗುರುವಾರ , ಏಪ್ರಿಲ್ 15, 2021
31 °C

ಒಲಿಂಪಿಕ್ಸ್: ಎಂಟು ಆಟಗಾರ್ತಿಯರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಎಫ್‌ಪಿ,ಪಿಟಿಐ): `ಉದ್ದೇಶಪೂರ್ವಕವಾಗಿ ಸೋತ~ ಕಾರಣ  ನಾಲ್ಕು ಬ್ಯಾಡ್ಮಿಂಟನ್ ತಂಡಗಳ ಎಂಟು ಆಟಗಾರ್ತಿಯರನ್ನು ಲಂಡನ್ ಒಲಿಂಪಿಕ್ಸ್‌ನಿಂದ ಅಮಾನತು ಮಾಡಲಾಗಿದೆ.ಮಹಿಳಾ ಡಬಲ್ಸ್‌ನ ನಾಲ್ಕು ತಂಡಗಳ ಆಟಗಾರ್ತಿಯರು ಮುಂದಿನ ಸುತ್ತಿನಲ್ಲಿ ಅನುಕೂಲವಾಗಲಿ ಎಂಬ ಕಾರಣಕ್ಕೆ ಲೀಗ್ ಹಂತದ ಕೆಲವು ಪಂದ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಸೋತಿರುವುದು ತನಿಖೆಯಿಂದ ಗೊತ್ತಾಗಿದೆ.

 

ಕ್ಷಮೆ ಕೇಳಿದ ಸಂಘಟನಾ ಸಮಿತಿ
ಲಂಡನ್ (ಐಎಎನ್‌ಎಸ್): ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಸದಸ್ಯರೊಂದಿಗೆ ಬೆಂಗಳೂರಿನ ಯುವತಿ ಮಧುರಾ ನಾಗೇಂದ್ರ ಹೆಜ್ಜೆ ಹಾಕಿದ್ದ ಘಟನೆಗಾಗಿ ವಿಷಾದ ವ್ಯಕ್ತಪಡಿಸಿರುವ ಸಂಘಟನಾ ಸಮಿತಿ (ಎಲ್‌ಒಸಿಒಜಿ) ಭಾರತದ ಕ್ಷಮೆ ಕೋರಿದೆ. ಮಧುರಾ ವಿರುದ್ಧ ಯಾವುದೇ ಗಂಭೀರ ಕ್ರಮವನ್ನು ಕೈಗೊಳ್ಳಲು ಅವಕಾಶ ಇಲ್ಲದ ಕಾರಣ ಅವಳಿಗೆ ನೀಡಿದ್ದ ಮಾನ್ಯತಾ ಪತ್ರವನ್ನು ಎಲ್‌ಒಸಿಒಜಿ ಅಧಿಕಾರಿಗಳು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಚೀನಾದ ವಾಂಗ್ ಕ್ಸಿಯೋಲಿ-ಯು ಯಾಂಗ್, ಇಂಡೊನೇಷ್ಯಾದ ಗ್ರೇಸಿಯಾ ಪಾಲಿ-ಮೆಲಿಯಾನ ಜುಹಾರಿ, ದಕ್ಷಿಣ ಕೊರಿಯಾದ ಜಂಗ್ ಕ್ಯೂಂಗ್-ಕಿಮ್ ಹ ನಾ ಹಾಗೂ ಹ ಜಂಗ್ ಎನ್-ಕಿಮ್ ಮಿನ್ ಜಂಗ್ ಅವರನ್ನು ಅನರ್ಹಗೊಳಿಸಲಾಗಿದೆ.ತನಿಖೆ ನಡೆಸಿದ ಸಂಘಟನಾ ಸಮಿತಿ ಬುಧವಾರ ಈ ನಿರ್ಧಾರ ಕೈಗೊಂಡಿದೆ.  `ತಮ್ಮ ಲೀಗ್ ಪಂದ್ಯಗಳ ವೇಳೆ ಗೆಲ್ಲಲು ಪೂರ್ಣ ಪ್ರಮಾಣದ ಪ್ರಯತ್ನ ಹಾಕಿಲ್ಲ~ ಎಂಬ ಕಾರಣ ನೀಡಿ ಈ ಶಿಕ್ಷೆ ವಿಧಿಸಲಾಗಿದೆ. ಭಾರತ ಕೂಡಾ ತನಗೆ ಅನ್ಯಾಯವಾಗಿದೆ ಎಂದೂ ಈಗಾಗಲೆ ದೂರು ಸಲ್ಲಿಸಿದೆ. ಆದರೆ ಈಗ ಅನರ್ಹಗೊಂಡಿರುವ ಆಟಗಾರ್ತಿಯರು ಭಾರತವಿದ್ದ ಗುಂಪಿನಲ್ಲಿ ಇಲ್ಲ. ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ `ಬಿ~ ಗುಂಪಿನಲ್ಲಿ ಆಡಿದ್ದರು. ಅವರು ಎರಡು ಪಂದ್ಯಗಳನ್ನು ಗೆದ್ದಿದ್ದರೂ ಪಾಯಿಂಟ್‌ಗಳಲ್ಲಿ ಹಿನ್ನಡೆ ಕಂಡ ಕಾರಣ ಹೊರಬಿದ್ದಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.