ಶುಕ್ರವಾರ, ಮಾರ್ಚ್ 5, 2021
30 °C

ಒಲಿಂಪಿಕ್ಸ್ ತೆರಳಲು ಕಲ್ಮಾಡಿಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿಂಪಿಕ್ಸ್ ತೆರಳಲು ಕಲ್ಮಾಡಿಗೆ ಅನುಮತಿ

ನವ ದೆಹಲಿ (ಪಿಟಿಐ): ಭ್ರಷ್ಟಾಚಾರದ ಆರೋಪದ ಮೇಲೆ ಪದಚ್ಯುತರಾಗಿರುವ ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರಿಗೆ 2012ರ ಲಂಡನ್ಸ್ ಒಲಿಂಪಿಕ್ಸ್ ಹೋಗಲು ದೆಹಲಿ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಒಲಿಂಪಿಕ್ಸ್ ಗೆ ತೆರಳಲು ಅನುಮತಿ ಕೋರಿದ್ದ ಕಲ್ಮಾಡಿ ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತಲ್ವಂತ್ ಸಿಂಗ್ ಅವರು ಕಲ್ಮಾಡಿ ಅವರಿಗೆ ಜುಲೈ 26ರಿಂದ ಆ. 13ರವರೆಗೆ ಕೇವಲ ಒಲಿಂಪಿಕ್ಸ್ ಗೆ ಭೇಟಿ ನೀಡಲು ಮಾತ್ರ ಅನುಮತಿ ನೀಡಿದ್ದಾರೆ. ಜತೆಗೆ 10 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಭದ್ರತೆ ನೀಡಲು ಕಲ್ಮಾಡಿ ಅವರಿಗೆ ಆದೇಶಿಸಿದರು.

ಪ್ರಕರಣದ ಮೊದಲ ಆರೋಪಿಯಾಗಿರುವ ಕಲ್ಮಾಡಿ ಅವರು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟ (ಐಎಎಎಫ್) ಸಮಿತಿಯ ಸದಸ್ಯ ಹಾಗೂ ಏಷ್ಯನ್ ಅಥ್ಲೆಟಿಕ್ಸ್ ಒಕ್ಕೂಟ (ಎಎಎ) ಅಧ್ಯಕ್ಷರೂ ಆಗಿರುವ ಅವರ ಸಂಪೂರ್ಣ ವಿಚಾರಣೆ ಮುಗಿದಿದೆ. ಪ್ರಕರಣದ ಇನ್ನಿತರ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಇದು ಪೂರ್ಣಗೊಳ್ಳಲು ಇನ್ನೂ ಕೆಲ ಕಾಲ ಬೇಕಾಗಿದೆ. ಹೀಗಾಗಿ ಕಲ್ಮಾಡಿ ಅವರ ಅರ್ಜಿಯನ್ನು ಪುರಸ್ಕರಿಸಲಾಯಿತು ಎಂದು ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.