ಒಲಿಂಪಿಕ್ಸ್ ವೀಕ್ಷಿಸಲು ಅವಕಾಶ ನೀಡಿ: ಎಸ್‌ಎಐ

ಸೋಮವಾರ, ಜೂಲೈ 22, 2019
27 °C

ಒಲಿಂಪಿಕ್ಸ್ ವೀಕ್ಷಿಸಲು ಅವಕಾಶ ನೀಡಿ: ಎಸ್‌ಎಐ

Published:
Updated:

ನವದೆಹಲಿ (ಪಿಟಿಐ): `ಲಂಡನ್‌ಗೆ ತೆರಳಿ ಒಲಿಂಪಿಕ್ಸ್ ಕ್ರೀಡಾಕೂಟಗಳನ್ನು ನೋಡಲು ನಮಗೂ ಅವಕಾಶ ನೀಡಿ~ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕೆಲ ಹಿರಿಯ ಅಧಿಕಾರಿಗಳು ಕೇಂದ್ರ ಕ್ರೀಡಾ ಸಚಿವರಿಗೆ ಪತ್ರ ಬರೆದಿದ್ದಾರೆ.ಎಸ್‌ಎಐ ಕಾರ್ಯದರ್ಶಿ ಪಿ.ಕೆ. ದೇಬ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರೇಮ್‌ಚಂದ್ ಕಶ್ಯಪ್ ಅವರು ಪತ್ರ ಬರೆದಿದ್ದು, 33 ವರ್ಷಗಳ ದೀರ್ಘಾವಧಿಯಾಗಿ ಕ್ರೀಡಾ ಪ್ರಾಧಿಕಾರದಲ್ಲಿ ಕೆಲಸ ಮಾಡಿದ್ದೇವೆ. 2014ರಲ್ಲಿ ನಿವೃತ್ತಿ ಹೊಂದುತ್ತೇವೆ. ಮತ್ತೆ ಒಲಿಂಪಿಕ್ಸ್ ನೋಡಲು ಅವಕಾಶ ಸಿಗುವುದಿಲ್ಲ. ಆದ್ದರಿಂದ ಈ ಸಲ ಅವಕಾಶ ನೀಡಬೇಕು~ ಎಂದು ಮನವಿ ಮಾಡಿಕೊಂಡಿದ್ದಾರೆ.`ಕ್ರೀಡಾ ಪ್ರಾಧಿಕಾರದಲ್ಲಿದ್ದುಕೊಂಡೇ ಸಾಕಷ್ಟು ಕ್ರೀಡಾ ಚುಟುವಟಿಕೆಗಳಿಗೆ ಉತ್ತೇಜನ ನೀಡಿರುವ ಹಿರಿಯ   ಅಧಿಕಾರಿ ಕಶ್ಯಪ್‌ಗೆ ಅವಕಾಶ ನೀಡಿ. ಜಗತ್ತಿನ ದೊಡ್ಡ ಕ್ರೀಡಾಕೂಟ ನೋಡುವ ಅವಕಾಶ ಅವರಿಗೆ ಸಿಗಲಿ~ ಎಂದು ಎಸ್‌ಎಐ ಕೆಲ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry