ಒಲಿಂಪಿಕ್ ಕೂಟದಲ್ಲಿ ಮುಸ್ಲಿಮ್ ಮಹಿಳೆಯರು; ಒಬಾಮ ಮೆಚ್ಚುಗೆ

ಸೋಮವಾರ, ಮೇ 27, 2019
33 °C

ಒಲಿಂಪಿಕ್ ಕೂಟದಲ್ಲಿ ಮುಸ್ಲಿಮ್ ಮಹಿಳೆಯರು; ಒಬಾಮ ಮೆಚ್ಚುಗೆ

Published:
Updated:

ವಾಷಿಂಗ್ಟನ್ (ಎಎಫ್‌ಪಿ): ಲಂಡನ್ ಒಲಿಂಪಿಕ್ಸ್‌ನಲ್ಲಿ ಮುಸ್ಲಿಮ್ ದೇಶಗಳ ಮಹಿಳಾ ಅಥ್ಲೀಟ್‌ಗಳು ಪಾಲ್ಗೊಂಡಿದ್ದಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.`ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಪ್ರತಿ ದೇಶದ ತಂಡದಲ್ಲಿ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಅದರಲ್ಲೂ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ದೇಶಗಳ ಪ್ರತಿ ತಂಡದಲ್ಲಿ ಮಹಿಳಾ ಅಥ್ಲೀಟ್‌ಗಳು ಇದ್ದರು. ಇದೊಂದು ಗಮನಾರ್ಹ ವಿಷಯ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು~ ಎಂದು ಅವರು ನುಡಿದಿದ್ದಾರೆ.ಈ ಒಲಿಂಪಿಕ್ಸ್‌ನಲ್ಲಿ ಮಧ್ಯಮ ದೂರದ ಓಟಗಾರ್ತಿ ಸಾರಾ ಅತ್ತರ್ ಐತಿಹಾಸಿಕ ಸಾಧನೆಯೊಂದಕ್ಕೆ ಕಾರಣರಾದರು. ಏಕೆಂದರೆ ಸೌದಿ ಅರೇಬಿಯಾವನ್ನು ಪ್ರತಿನಿಧಿಸಿದ ಮೊದಲ ಮಹಿಳೆ ಎನಿಸಿದರು.`ಇದೊಂದು ಐತಿಹಾಸಿಕ ಕ್ಷಣ. ಇದು ದೇಶದಲ್ಲಿ ಹೊಸ ಯುಗಕ್ಕೆ ಕಾರಣವಾಗಲಿದೆ. ಇದೊಂದು ದೊಡ್ಡ ಹೆಜ್ಜೆ. ಇದೊಂದು ಅಮೋಘ ಅನುಭವ~ ಎಂದು ಅತ್ತರ್ ನುಡಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry