ಒಲಿವಿಯೊ ಕಲ್ಪೊಗೆ ವಿಶ್ವ ಸುಂದರಿ ಪಟ್ಟ

7

ಒಲಿವಿಯೊ ಕಲ್ಪೊಗೆ ವಿಶ್ವ ಸುಂದರಿ ಪಟ್ಟ

Published:
Updated:

 


ಲಾಸ್ ಏಂಜಲೀಸ್ (ಪಿಟಿಐ): ಲಾಸ್ ವೆಗಾಸ್‌ನಲ್ಲಿ ನಡೆದ `ವಿಶ್ವ ಸುಂದರಿ' ಸ್ಪರ್ಧೆಯಲ್ಲಿ ಅಮೆರಿಕದ ರೋಡ್ ಐಲೆಂಡ್‌ನ ಒಲಿವಿಯಾ ಕಲ್ಪೊ ಅವರು `ವಿಶ್ವ ಸುಂದರಿ-2012'ಆಗಿ ಆಯ್ಕೆಯಾಗಿದ್ದಾರೆ.

 

ಸುಮಾರು ಎರಡು ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ವಿಶ್ವದೆಲ್ಲೆಡೆಯ 88 ಸ್ಪರ್ಧಿಗಳನ್ನು ಹಿಂದಿಕ್ಕಿ ಒಲಿವಿಯಾ ಈ ಪಟ್ಟಕ್ಕೇರಿದ್ದಾರೆ. ಫಿಲಿಪ್ಪೀನ್ಸ್‌ನ ಜಾನೈನ್ ಟುಗೊನಾನ್ ಮೊದಲ ರನ್ನರ್ ಅಪ್ ಹಾಗೂ ವೆನಿಜುವೆಲಾದ ಐರಿನ್ ಎಸ್ಸರ್ 2 ನೇ  ರನ್ನರ್ ಅಪ್ ಆಗಿ ಆಯ್ಕೆಗೊಂಡರು. ಭಾರತದ ಶಿಲ್ಪಾ ಸಿಂಗ್ 16ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕೆಂಪು ಉಡುಪು ಧರಿಸಿದ್ದ ಕಲ್ಪೊಗೆ 2011ರ ವಿಜೇತೆ ಅಂಗೋಲಾದ ಲೀಲಾ ಲೋಪೆಜ್ ಕಿರೀಟ ತೊಡಿಸಿದರು. 

 

ರೋಡ್ ಐಲೆಂಡ್‌ನ ಕ್ರಾನ್‌ಸ್ಟನ್‌ನಲ್ಲಿ ಬೆಳೆದ ಕಲ್ಪೊ, ದಶಕಗಳ ಬಳಿಕ ಅಮೆರಿಕಕ್ಕೆ ಈ ಪಟ್ಟ ದೊರಕಿಸಿಕೊಟ್ಟಿದ್ದಾರೆ. 1997ರಲ್ಲಿ ಅಮೆರಿಕದ ಬ್ರೂಕ್ ಲೀ ವಿಶ್ವ ಸುಂದರಿಯಾಗಿದ್ದರು.ಸಂಗೀತ ಕಲಾವಿದರ ಪುತ್ರಿಯಾಗಿರುವ ಒಲಿವಿಯೊ ಸಹಜವಾಗಿಯೇ ಬಾಲ್ಯದಲ್ಲಿ ವಾದ್ಯ ಸಂಗೀತವನ್ನು ಕಲಿತಿದ್ದಾರೆ. ಭವಿಷ್ಯದಲ್ಲಿ ಚಲನಚಿತ್ರ ಅಥವಾ ಟಿವಿ ಮಾಧ್ಯಮದಲ್ಲಿ ನಟನೆ ವೃತ್ತಿ ಬದುಕು ಮುಂದುವರಿಸಲು ಒಲಿವಿಯಾ ಇಚ್ಛಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry