`ಒಳಚರಂಡಿ ಕಾಮಗಾರಿ ಸದ್ಯಕ್ಕೆ ಬೇಡ'

7

`ಒಳಚರಂಡಿ ಕಾಮಗಾರಿ ಸದ್ಯಕ್ಕೆ ಬೇಡ'

Published:
Updated:

ಆನೇಕಲ್: `ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿಗೆ ನೂತನ ಪುರಸಭಾ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರವೇ ಚಾಲನೆ ನೀಡಬೇಕು' ಎಂದು ಪಟ್ಟಣದ ಟೌನ್ ಬಿಜೆಪಿ ಘಟಕ ಒತ್ತಾಯಿಸಿದೆ.ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಟ್ಟಣದ ಮಹತ್ವಾಕಾಂಕ್ಷೆಯ ಈ ಯೋಜನೆ ಮಂಜೂರಾಗಿತ್ತು. ಚುನಾವಣೆ ಘೋಷಣೆಯಾದ್ದರಿಂದ ಚಾಲನೆಯಾಗಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಶಾಸಕರು ರಾಜಕೀಯ ಕಾರಣಗಳಿಗಾಗಿ ತರಾತುರಿಯಲ್ಲಿ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ.ನೂತನ ಪುರಸಭಾ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಟ್ಟಣದ ಜನತೆಯ ಸಮ್ಮುಖದಲ್ಲಿ ಚಾಲನೆ ನೀಡಬೇಕು. ಚಾಲನೆಗೆ ಮುಂದಾದಲ್ಲಿ ಬಿಜೆಪಿ ಟೌನ್ ಘಟಕದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆ ತಿಳಿಸಿದೆ.ಟೌನ್ ಬಿಜೆಪಿ ಅಧ್ಯಕ್ಷ ಶಿವರಾಮ್, ಪುರಸಭಾ ಸದಸ್ಯರಾದ ನರಸಿಂಹರೆಡ್ಡಿ, ಕೆ.ನಾಗರಾಜು, ಶ್ರೆನಿವಾಸ್, ಜಯಲಕ್ಷ್ಮೀಮುನಿರಾಜು, ರಾಜಪ್ಪ ಮತ್ತಿತರ ಮುಖಂಡರು ಪತ್ರಿಕಾ ಹೇಳಿಕೆಗೆ ಸಹಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry