ಬುಧವಾರ, ಮೇ 18, 2022
23 °C

ಒಳಚರಂಡಿ ಪೈಪು ಬದಲಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಮೈಸೂರು ರಸ್ತೆ ದೀಪಾಂಜಲಿ ನಗರದ ರೈಲ್ವೆ ಹಳಿಗಳ ಪಕ್ಕ ಇರುವ ನೇತಾಜಿ ಬಡಾವಣೆ, ವಿಜಯನಗರ 2ನೇ ಹಂತ, ವಾರ್ಡ್ ನಂ. 132, 4ನೇ ತಿರುವಿನಲ್ಲಿ ಒಳಚರಂಡಿ ಕೊಳವೆಗಳನ್ನು ಅಳವಡಿಸಿ ಸುಮಾರು 20 ವರ್ಷಗಳಾಗಿವೆ.ಸದರಿ ಪೈಪ್‌ಗಳನ್ನು ಹೆಗ್ಗಣಗಳು ಕೊರೆದು ಹಾಕಿವೆ. ಬಡಾವಣೆಯಲ್ಲಿ ಸುಮಾರು 17 ಕಟ್ಟಡಗಳಿವೆ. ಹಾಗೂ ಶೌಚಾಲಯದ ಒಳಚರಂಡಿಗೆ ಈ ಮೂಲಕವೇ ಪೈಪುಗಳನ್ನು ಅಳವಡಿಸಲಾಗಿದೆ.ಒಡೆದಿರುವ ಕೊಳವೆಗಳ ಮೂಲಕ ಮಲ ಕೊಳಚೆನೀರು ಹೊರಗೆ ಹರಿದು ಬಂದು ನೆಲಮಹಡಿ ಮನೆ ಹಾಗೂ ರೂಂ, ಅಡಿಗೆ ಮನೆಗೂ ಹೊಲಸು ನೀರು ನುಗ್ಗಿ ಕಷ್ಟ ಅನುಭವಿಸಬೇಕಿದೆ.  ಹಾಗೂ ಇದರಿಂದ ಬಡಾವಣೆಯ ನಾಗರಿಕರಿಗೆ ಸಾಂಕ್ರಾಮಿಕ ರೋಗ, ಕಾಲರ ಮುಂತಾದ ಕಾಯಿಲೆಗೆ ತುತ್ತಾಗುವುದು ಸಾಮಾನ್ಯವಾಗಿದೆ.ಸಂಬಂಧಪಟ್ಟ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ಕೂಡಲೇ ಒಡೆದ ಕೊಳಚೆ ನೀರಿನ ಕೊಳವೆಗಳನ್ನು ತೆಗೆದು ಹೊಸದಾಗಿ ಒಳಚರಂಡಿ ಕೊಳವೆಯನ್ನು ಅಳವಡಿಸಬೇಕೆಂದು ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.