ಮಂಗಳವಾರ, ಜನವರಿ 28, 2020
23 °C

ಒಳಚರಂಡಿ ಸ್ವಚ್ಛತೆಗೆ ಬಳಕೆಯಾಗದ ಯಂತ್ರ

ಪ್ರಜಾವಾಣಿ ವಾರ್ತೆ/ ಉ.ಮ.ಮಹೇಶ್ Updated:

ಅಕ್ಷರ ಗಾತ್ರ : | |

ಮಂಡ್ಯ: ಒಳಚರಂಡಿ ಶುಚಿಗೊಳಿಸಲು ಅನುಸರಿಸಬೇಕಾದ ಕ್ರಮ ಕುರಿತಂತೆ ಸರ್ಕಾರದ ಸೂಚನೆಗೆ ನಗರದಲ್ಲಿ ಬೆಲೆ ಇಲ್ಲ. ಜಿಲ್ಲಾಡಳಿತ ಮತ್ತು ನಗರಸಭೆ ಆಯುಕ್ತರು ಈ ಕುರಿತು ನೀಡಿದ್ದ ಪ್ರತ್ಯೇಕ ಸೂಚನೆಗಳು ಕೇವಲ ಕಾಗದ ಮೇಲಷ್ಟೇ ಇವೆ.ನಾಗರಿಕತೆ ಎಷ್ಟೆಲ್ಲಾ ಬೆಳೆದರೂ ಒಳಚರಂಡಿ ಹಿಂದಿನಂತೆ ಬರೀ ಕೈಯಲ್ಲಿ, ಒಳಚರಂಡಿ ಆಳಕ್ಕೆ ಇಳಿದೇ ಸ್ವಚ್ಛಗೊಳಿಸ ಬೇಕಾದ ಸ್ಥಿತಿ ಪೌರಕಾರ್ಮಿಕರದು. ನಗರದ ಹೃದಯ ಭಾಗದ ವಿವೇಕಾನಂದ ರಸ್ತೆಯಲ್ಲಿ ಭಾನುವಾರ ಸಹ ಕಂಡು ಬಂದ ದೃಶ್ಯವಿದು.ಒಳಚರಂಡಿ ಕೆಟ್ಟು ತ್ಯಾಜ್ಯ ರಸ್ತೆಗೇ ಹರಿಯುತ್ತಿದೆ. ಅದನ್ನು ಸ್ವಚ್ಛಗೊಳಿಸಲು, ಇಬ್ಬರು ಕಾರ್ಮಿಕರು ಇನ್ನಿಲ್ಲದ ಪಡಿಪಾಟಲು ಪಡುತ್ತಿದ್ದರು. `ನಮಗೆ ಭಾನುವಾರದ ರಜೆಯೂ ಇಲ್ಲ. ಇಂಥ ಪರಿಸ್ಥಿತಿ ಎದುರಾದರೆ ಕೈಗೆ ಗ್ಲೌಸ್ ಧರಿಸದೇ ಸ್ವಚ್ಛತೆಗೆ ಇಳಿಯ ಬೇಕು~ ಎಂಬುದು ಅವರ ಪ್ರತಿಕ್ರಿಯೆ.ನಗರಸಭೆ ಇಂಥ ಸಂದರ್ಭಗಳಲ್ಲಿ ಬಳಸಲು ಪೌರ ಕಾರ್ಮಿಕರಿಗೆ ಕೈಗವಸು, ಕಾಲಿಗೆ ಶೂ ನೀಡಲು ಹಣ ವ್ಯಯಿಸುತ್ತದೆ. ಈ ಕಾರ್ಮಿ ಕರಿಗೆ ಅದರ ನೆರವು ಇರಲಿಲ್ಲ. ಒಳಚರಂಡಿ ಸ್ವಚ್ಛತೆಯನ್ನು ಯಂತ್ರ ಬಳಸಿಯೇ (ಸಕ್ಕಿಂಗ್ ಮಷೀನ್) ಮಾಡಬೇಕು ಎಂಬುದು ಇವರಿಗೆ ನೆನಪಿದ್ದಂತೆ ಕಾಣದು.ಈಚೆಗೆ ಕೋಲಾರ ಜಿಲ್ಲೆಯಲ್ಲಿ ಒಳಚರಂಡಿ ಸ್ಚಚ್ಛಗೊಳಿಸಲು ಹೋಗಿ ಇಬ್ಬರು ಕಾರ್ಮಿ ಕರು ಮೃತಪಟ್ಟ ಬಳಿಕ ನಗರಾಭಿವೃದ್ಧಿ ಖಾತೆ ಸಚಿವ ಸುರೇಶ್ ಕುಮಾರ್, ಇಂಥ ಅಮಾನ ವೀಯ ಕ್ರಮದ ಬಗೆಗೆ ಎಚ್ಚರಿಕೆ ನೀಡಿದ್ದರು.ಬಳಿಕ ಕೆಲ ವಾರಗಳ ಹಿಂದೆ ಜಿಲ್ಲಾಧಿಕಾರಿ ಡಾ. ಜಾಫರ್ ಮತ್ತು ನಗರಸಭೆಆಯುಕ್ತ ಪ್ರಕಾಶ್ ಅವರು ಪ್ರತ್ಯೇಕ ಸೂಚನೆ ನೀಡಿ, ಇನ್ನು ಮುಂದೆ ಜಿಲ್ಲೆಯಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರ ಬಳಸಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದರು. ತಪ್ಪಿದ್ದಲ್ಲಿ ಅಂಥವರ ವಿರುದ್ಧ, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದರು. ಈಗ ನಗರದಲ್ಲೇ ಅಂಥ ಘಟನೆ ನಡೆದಿದೆ.ಈ ಕುರಿತು ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್ ಅವರನ್ನು ಸಂಪರ್ಕಿಸಿದಾಗ, `ನಗರಸಭೆ ವ್ಯಾಪ್ತಿಯಲ್ಲಿ 80 ಮಂದಿ ಕಾಯಂ ಪೌರ ಕಾರ್ಮಿಕರು, ಹೊಸ ಪ್ಯಾಕೇಜ್ ಅನ್ವಯ ಸುಮಾರು 200 ಮಂದಿ ಗುತ್ತಿಗೆ ಆಧಾರದ ಪೌರಕಾರ್ಮಿಕರು ಇರಬಹುದು ಎಂದರು.ಪ್ರಸ್ತುತ ನಗರಸಭೆಯಲ್ಲಿ ಒಂದು ಸಂಕ್ಷನ್ ಯಂತ್ರ ಇದೆ. ರೂ. 45 ಲಕ್ಷ ವೆಚ್ಚದಲ್ಲಿ ಇನ್ನೊಂದು ಯಂತ್ರ ಖರೀದಿಸಲು ಕ್ರಮ ಕೈಗೊ ಳ್ಳಲಾಗಿದೆ. ಅದು ವಾರದಲ್ಲಿ ನಗರಸಭೆಗೆ ಬರಬಹುದು~ ಎಂದು ಪ್ರತಿಕ್ರಿಯಿಸಿದರು.ಆಯುಕ್ತ ಪ್ರಕಾಶ್‌ರನ್ನು ಸಂಪರ್ಕಿಸಿದಾಗ, ಒಳಚರಂಡಿಯನ್ನು ಸುರಕ್ಷತಾ ಕ್ರಮವಿಲ್ಲದೇ ಬರೀ ಕೈಯಲ್ಲಿ ಸ್ವಚ್ಛಗೊಳಿಸಲು ಅವಕಾಶವಿಲ್ಲ. ಈ ಬಗ್ಗೆ ಸೂಚನೆ ನೀಡಿದ್ದೇನೆ. ಒಂದು ವೇಳೆ ಅಂಥ ನಿದರ್ಶನ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.ಈಗ ನಗರಸಭೆ ಸಿಬ್ಬಂದಿಯೇ ಕೆಲಸ ಮಾಡುತ್ತಿದ್ದಾರೆ. ಯಾರ ವಿರುದ್ಧ ಮೊಕದ್ದಮೆ ದಾಖಲಿಸುತ್ತೀರಿ ಎಂಬ ಪ್ರಶ್ನೆಗೆ, `ಎಲ್ಲಿ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸು ತ್ತಿದ್ದೇನೆ~ ಎಂದು ಪ್ರತಿಕ್ರಿಯಿಸಿದರು.ಒಳಚರಂಡಿ ಅವ್ಯವಸ್ಥೆಯ ಜತೆಗೆ ತೆರೆದ ಮ್ಯಾನ್‌ಹೋಲ್‌ಗಳು ನಗರದಲ್ಲಿ ಸಾಕಷ್ಟಿವೆ. ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಕಳೆದ ಮೂರುವರೆ ವರ್ಷದ ಅವಧಿಯಲ್ಲಿ ಕನಿಷ್ಠ ಈ ಸಮಸ್ಯೆಗೂ ಪರಿಹಾರ ದೊರೆತಿಲ್ಲ. ಅಭಿವೃದ್ಧಿ ಹಿನ್ನಡೆ ಆಗಿದೆ ಎಂಬುದನ್ನು ಆ ಪಕ್ಷದ ಮುಖಂಡರು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಪ್ರತಿಕ್ರಿಯಿಸಿ (+)