ಭಾನುವಾರ, ಏಪ್ರಿಲ್ 18, 2021
33 °C

ಒಳನಾಡಿನಲ್ಲಿ ಮುಂಗಾರು ಕ್ಷೀಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನಲ್ಲಿ ಮುಂಗಾರು ಕ್ಷೀಣಿಸಿದೆ. ರಾಜ್ಯದ ಕರಾವಳಿ ಸೇರಿದಂತೆ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.ಬೆಳ್ತಂಗಡಿಯಲ್ಲಿ 6 ಸೆಂ.ಮೀ ಮಳೆಯಾಗಿದೆ. ಸುಬ್ರಹ್ಮಣ್ಯ 5, ಸಿದ್ದಾಪುರ, ಭಟ್ಕಳ, ಆಗುಂಬೆ 4, ಉಡುಪಿ, ಆಳಂದ, ಪೊನ್ನಂಪೇಟೆ, ತಿ.ನರಸಿಪುರ 3, ಪಣಂಬೂರು, ಬಂಟ್ವಾಳ, ಧರ್ಮಸ್ಥಳ, ಸುಳ್ಯ, ಕೊಲ್ಲೂರು, ಕುಂದಾಪುರ 2, ಮೂಡಬಿದಿರೆ, ಮಾಣಿ, ಉಪ್ಪಿನಂಗಡಿ, ಕೋಟ, ಶಿರಾಲಿ, ಗೇರುಸೊಪ್ಪ, ಕುಮಟಾ, ಅಂಕೋಲಾ, ಕದ್ರಾ, ಜಗಲ್‌ಬೇಟ್, ಕಾರವಾರ, ಗುಲ್ಬರ್ಗ, ಮಡಿಕೇರಿ, ವಿರಾಜಪೇಟೆ, ತೀರ್ಥಹಳ್ಳಿ, ಕೊಟ್ಟಿಗೆಹಾರ, ಬೇಲೂರು, ಗೌರಿಬಿದನೂರಿನಲ್ಲಿ 1 ಸೆಂ.ಮೀ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಘಟ್ಟಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.