ಬುಧವಾರ, ನವೆಂಬರ್ 20, 2019
20 °C

ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

Published:
Updated:

ಬೆಂಗಳೂರು: ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ.ಹಳ್ಳಿಮೈಸೂರು, ಹೊಳೆನರಸೀಪುರ, ಬಂಗಾರಪೇಟೆಯಲ್ಲಿ ತಲಾ 3 ಸೆ.ಮೀ ಮಳೆಯಾಗಿದೆ. ನಾಪೋಕ್ಲು, ಕೆ.ಆರ್.ನಗರ, ಹೆಸರಘಟ್ಟ ತಲಾ 2, ಕುಷ್ಟಗಿ, ಕುಶಾಲನಗರ, ಸಿ.ಆರ್.ಪಟ್ಟಣ, ಶ್ರವಣಬೆಳಗೊಳ, ಪಿರಿಯಾಪಟ್ಟಣ, ಕೊಳ್ಳೇಗಾಲ, ಮಾಲೂರು, ಚಿಕ್ಕಬಳ್ಳಾಪುರ, ಹುಲಿಯೂರುದುರ್ಗ ತಲಾ ಒಂದು ಸೆ.ಮೀ ಮಳೆಯಾಗಿದೆ. ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರತಿಕ್ರಿಯಿಸಿ (+)