ಸೋಮವಾರ, ಅಕ್ಟೋಬರ್ 21, 2019
26 °C

ಒಳಾಂಗಣ: ಕೆಲವು ಸಲಹೆಗಳು...

Published:
Updated:

ಲ್ಯಾಂಪ್‌ಗಳ ಆಯ್ಕೆ: ಮನೆಯ ಯಾವ  ಕೋಣೆಗಳಿಗೆ ಲ್ಯಾಂಪ್‌ಗಳು ಬೇಕು ಎನ್ನುವುದನ್ನು ಮೊದಲು ಗಮನಿಸಿ. ಬಳಿಕ ಯಾವ ಉದ್ದೇಶಕ್ಕೆ ಲ್ಯಾಂಪ್‌ಗಳನ್ನು ಬಳಸುತ್ತೀರಿ? ಯಾವುದರ ಮೇಲೆ ಲ್ಯಾಂಪ್ ಇಡುತ್ತೀರಿ? ಇದು ಕೂಡ ಮುಖ್ಯವಾಗುತ್ತದೆ. ನೀವು ಎಲ್ಲಿ ಲ್ಯಾಂಪ್ ಇಡುತ್ತೀರೆಂದು ಮೊದಲು ನಿರ್ಧರಿಸಿ ಬಳಿಕ ಆ ಜಾಗಕ್ಕೆ ಸರಿಯಾಗಿ ಕುಳಿತುಕೊಳ್ಳುವ ಲ್ಯಾಂಪ್‌ಗಳನ್ನು ಕೂರಿಸಿ.  ದೊಡ್ಡ ಮೇಜಿನ ಮೇಲೆ ಸಣ್ಣ ಲ್ಯಾಂಪ್‌ಗಳು ಹೆಚ್ಚು ಅಂದವಾಗಿ ಕಾಣಲಾರವು.ಹೂವಿನ ಕುಂಡ: ಮನೆಯಲ್ಲಿ ಹಸಿರು ಇಷ್ಟಪಡುವವರು ಪಾಟ್‌ಗಳನ್ನು ಲಿವಿಂಗ್ ರೂಂನಲ್ಲಿಡಬಹುದು. ಸಣ್ಣ ಲಿವಿಂಗ್ ರೂಂ ಆದರೆ ಹ್ಯಾಂಗಿಂಗ್ ಪಾಟ್‌ಗಳನ್ನು ಬಳಸಬಹುದು. ಇದು ಕೋಣೆಯ ಆ್ಯಂಬಿಯನ್ಸ್ ಅನ್ನೇ ಬದಲಾಯಿಸುತ್ತದೆಯಲ್ಲದೆ ಕೋಣೆಗೆ ಉತ್ತಮ ಆಮ್ಲಜನಕವನ್ನು ಒದಗಿಸುತ್ತದೆ. ದೊಡ್ಡ ಲಿವಿಂಗ್ ರೂಂ ಆದರೆ ಗಿಡಮೂಲಿಕೆ ಸಸ್ಯಗಳನ್ನು ಇಡಬಹುದು.ವಾಸ್‌ಗಳು: ಬಹಳ ಹಿಂದಿನ ಕಾಲದಿಂದಲೂ ವಾಸ್‌ಗಳನ್ನು ಬಳಸಲಾಗುತ್ತಿತ್ತು. ಇವುಗಳಲ್ಲಿ ಹಲವು ವಿಧ. ಸಿರಾಮಿಕ್, ಮಣ್ಣಿನ ವಾಸ್‌ಗಳು, ಗಾಜಿನ ವಾಸ್‌ಗಳು, ಆ್ಯಂಟಿಕ್ ವಾಸ್‌ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನೆಯ ಗೃಹಾಲಂಕಾರಕ್ಕೆ ಅನುಗುಣವಾಗಿ ಹಾಗೂ ನಮ್ಮ ಅಭಿರುಚಿಗೆ ಅನುಗುಣವಾಗಿ ಇವುಗಳ ಆಯ್ಕೆ ಅಗತ್ಯ. ಇನ್ನು ಬೆಡ್‌ಶೀಟ್‌ಗಳು ಮತ್ತು ಬೆಡ್‌ಸ್ಪ್ರೆಡ್‌ಗಳಲ್ಲಂತೂ ಬಹಳಷ್ಟು ವೆರೈಟಿಗಳಿವೆ. ಸಾಫ್ಟ್ ಫರ್ನಿಶಿಂಗ್ ಗುಂಪಿಗೆ ಸೇರುವ ಅವುಗಳ ಬಣ್ಣ ಮತ್ತು ಟೆಕ್ಚರ್‌ಗಳಲ್ಲಿಯೂ ಸಾಕಷ್ಟು ಆಯ್ಕೆಗಳಿವೆ. ರೇಖಾಗಣಿತದ ವಿನ್ಯಾಸಗಳು, ಅಂತೆಯೇ ಅಬ್‌ಸ್ಟ್ರಾಕ್ಟ್ ವಿನ್ಯಾಸಗಳೂ ಧಾರಾಳವಾಗಿವೆ. ಕಾರ್ಟೂನ್ ಪ್ರಿಂಟ್‌ಗಳು ಮಕ್ಕಳ ಕೋಣೆ ಸೂಕ್ತ. ಬೆಡ್‌ಶೀಟ್‌ಗಳು ಮತ್ತು ಕುಷನ್ ಕವರ್‌ಗಳು ಹೊಂದಾಣಿಕೆ ಆಗಿರಬೇಕು. ಅಂತೆಯೇ ಟೇಬಲ್ ಕ್ಲಾತ್‌ಗಳೂ ಬಹುಮುಖ ಪಾತ್ರ ವಹಿಸುತ್ತವೆ. ಆಹಾರ ಸೇವಿಸಲು ಎಲ್ಲರೂ ಟೇಬಲ್ ಬಳಿ ಬಂದೇ ಬರುತ್ತಾರೆ. ಅಂಥ ಸಂದರ್ಭದಲ್ಲಿ ಟೇಬಲ್‌ಕ್ಲಾತ್‌ಗಳು ಪರಿಣಾಮ ಬೀರುತ್ತದೆ.ಕುಷನ್‌ಗಳ ವಿನ್ಯಾಸದಲ್ಲಿ ಕೂಡ ವಿನ್ಯಾಸಗಾರರು ಬಹಳಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕುಷನ್‌ಗಳಿಂದ ಮನೆಯಲ್ಲಿ `ಇನ್‌ಸ್ಟಂಟ್ ಫ್ರೆಷನೆಸ್~ ದೊರೆಯುತ್ತದೆ. ಗಾಢ ಬಣ್ಣ ಹಾಗೂ ಸರಳ ವಿನ್ಯಾಸದ ಕುಷನ್‌ಗಳು ಮನೆಗೆ ವಿಭಿನ್ನತೆ ತರುತ್ತವೆ. ಗುಲಾಬಿ, ಹಸಿರು ಹಾಗೂ ಕಪ್ಪು ಹಾಗೂ ಬಿಳಿ ಮಿಶ್ರಿತ ವಿನ್ಯಾಸಗಳು ಅಥವಾ ಹೂವಿನ ವಿನ್ಯಾಸಗಳು  ವಿಶಿಷ್ಟ ನೋಟ ನೀಡಬಲ್ಲವು. ಕೋಣೆಯ ಬಣ್ಣ ಕಪ್ಪು ಆಗಿದ್ದರೆ ನ್ಯೂಟ್ರಲ್ ಬಣ್ಣಗಳ ಕುಶನ್‌ಗಳನ್ನಿಡುವುದರ ಮೂಲಕ ಬಣ್ಣದ ಗಾಢತೆ ್ನ ಕಡಿಮೆ ಮಾಡಬಹುದು. ನಿಮಗೆ ಚಿತ್ರ ಬಿಡಿಸುವ ಹವ್ಯಾಸ ಇದ್ದರೆ ನಿಮ್ಮದೇ ವಿನ್ಯಾಸಗಳನ್ನು ಕುಷನ್ ಕವರ್‌ಗಳ ಮೇಲೆ ಬಿಡಿಸಿಕೊಳ್ಳಬಹುದು.    

Post Comments (+)