ಒಳಾಂಗಣ ವಿನ್ಯಾಸ; ಬಣ್ಣ, ಬೆಳಕಿನಾಟ

7

ಒಳಾಂಗಣ ವಿನ್ಯಾಸ; ಬಣ್ಣ, ಬೆಳಕಿನಾಟ

Published:
Updated:

ಮನೆಯೆಂಬುದು ಆಶ್ರಯದ ತಾಣ ಮಾತ್ರವಲ್ಲ. ಮನೆ ಒಡೆಯನ ವ್ಯಕ್ತಿತ್ವದ ಬಿಂಬವೂ ಹೌದು. ಕೇವಲ  ಕಲ್ಲು-ಸಿಮೆಂಟಿನಿಂದ ಮನೆ ನಿರ್ಮಾಣಗೊಳ್ಳದೇ,  ಭಾವನಾತ್ಮಕ ಸಂಬಂಧವೊಂದು ಗೋಡೆ-ಗೋಡೆಗಳ ನಡುವೆ ಬಂಧನಕ್ಕೆ ಒಳಗಾಗಿ  ಇದು `ನಮ್ಮ ಮನೆ~ ಎಂಬ ಅಭಿಮಾನ, ಪ್ರೀತಿ ಮೂಡಿಸಿರುತ್ತದೆ. ಪ್ರತಿಯೊಂದು ಮನೆಯೂ ಮನೆಯ ಒಡೆಯ-ಒಡತಿಯ ಅಭಿರುಚಿಗಳ ಅಭಿವ್ಯಕ್ತಿಯ ರೂಪಕದಂತೆಯೂ ಕಾಣುತ್ತದೆ.`ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು~ ಎಂಬ ಗಾದೆ ಹಳತು. ಆದರೆ, ಮನೆ ಕಟ್ಟಿ, ಅದರ ಒಳಾಂಗಣ ವಿನ್ಯಾಸಕ್ಕೂ ಅಷ್ಟೇ ಆದ್ಯತೆ ನೀಡದೆ ಹೋದರೆ ನೀವು ಕಾಲಕ್ಕೆ ತಕ್ಕಂತೆ ಬದಲಾಗಿಲ್ಲ  ಎಂಬುದೂ ವೇದ್ಯವಾಗುತ್ತದೆ.  ಅದಕ್ಕಾಗಿ ಮನೆ ಕಟ್ಟುವಷ್ಟೆ ಅದರ ಒಳಾಂಗಂಣ ವಿನ್ಯಾಸಕ್ಕೂ ಅಷ್ಟೇ ಒತ್ತು ನೀಡಬೇಕಿದೆ.ಒಳಾಂಗಣ ವಿನ್ಯಾಸದಲ್ಲಿ ಖ್ಯಾತಿಗಳಿಸಿರುವ ಸಂತೋಷ ಬಂಕಾಪುರ್ ಅವರು ಹೇಳುವ ಹಾಗೇ, ಯಾವುದೇ ಒಂದು ಮನೆ ಆಕರ್ಷಕವಾಗಿ ಕಾಣಲು ಎರಡು ಸಂಗತಿಗಳು ಒಳಾಂಗಣ ವಿನ್ಯಾಸದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅವು ಯಾವವು ಎಂದರೆ, ಬಣ್ಣ ಮತ್ತು ಬೆಳಕು (ಪೇಟಿಂಗ್ ಮತ್ತು ಲೈಟಿಂಗ್).ವ್ಯಕ್ತಿಯ ಭಾವನೆಗಳನ್ನು ಮನೆಯ ಗೋಡೆಗೆ ಬಳಿದ ಬಣ್ಣಗಳು ಬದಲಾಯಿಸುತ್ತವೆ. ಮುಖ್ಯವಾಗಿ ವಿವಿಧ ರೀತಿಯ ಬಣ್ಣಗಳು ಮನಸ್ಸಿನಲ್ಲಿ ನಡೆಯುವ ಹಲವು ರೀತಿಯ ಭಾವನೆಗಳ ಪ್ರತೀಕವಾಗಿರುತ್ತವೆ. ಬೆಳಕು ಮತ್ತು ಹದವಾದ ಬಣ್ಣಗಳು  ಮನಸ್ಸಿಗೆ ಹೆಚ್ಚು ಆರಾಮ ಭಾವನೆ ನೀಡುತ್ತವೆ.  ಅದರಲ್ಲೂ ಬಿಳಿ, ಕೆನೆ ಮತ್ತು ಆನೆ ದಂತದ  ಬಣ್ಣಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.ನಮ್ಮಲ್ಲಿ ಮಾತ್ರ ಬಿಳಿಯ ಬಣ್ಣಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ, ವಾಸ್ತವವಾಗಿ ಬೇರೆ ಕಡೆಗಳಲ್ಲಿ   ಇಷ್ಟು ಟ್ಯೂಬ್‌ಲೈಟ್‌ಗಳನ್ನು ಮನೆಗಳಿಗೆ ಅಳವಡಿಸುವುದಿಲ್ಲ.

ಯಾವುದೇ ಮನೆಯ ಒಳಾಂಗಣ ವಿನ್ಯಾಸ ಮಾಡುವಾಗ 3 ಬಗೆಯಲ್ಲಿ ಗೋಡೆಯ ವಿನ್ಯಾಸ  ರೂಪಿಸಬೇಕಾಗುತ್ತದೆ. ಅಂದರೆ ಮನೆಯ ಒಳ ಪ್ರವೇಶಿಸುತ್ತಿದ್ದಂತೆ ಎದುರಾಗುವ ಗೋಡೆಗೆ ಗಾಢ ಬಣ್ಣ ಬಳಿಯಲಾಗಿರುತ್ತದೆ.  ಎಡ ಮತ್ತು ಬಲಗಡೆಯ ಗೋಡೆಗಳಿಗೆ ಕಡಿಮೆ ಪ್ರಮಾಣದ ಬಣ್ಣದ ಬಳಕೆ  ಇರುತ್ತದೆ. ಯಾವುದೇ ಮನೆಯ ಒಳಾಂಗಣ ವಿನ್ಯಾಸ ಮಾಡುವಾಗ ವ್ಯಕ್ತಿಯ ಜೀವನಶೈಲಿ ಆಧರಿಸಿ  ಒಳಾಂಗಣ ವಿನ್ಯಾಸ ಮಾಡುತ್ತೇವೆ ಎಂದು ಸಂತೋಷ್ ಬಂಕಾಪುರ್ ಹೇಳುತ್ತಾರೆ.ಕೆಲವರು ಹೇಳುವುದು ಒಂದು ಮತ್ತೆ ಅವರು ಮನೆಯಲ್ಲಿ ಇರುವುದೇ ಬೇರೆ ರೀತಿಯದ್ದು ಆಗಿರುತ್ತದೆ, ಹೀಗಾಗಿ ಅವರು ಮನೆಗಳಿಗೆ ಯಾವುದು ಬಣ್ಣ ಹೊಂದುತ್ತದೆ ಎಂದು  ಹೇಳುವುದರ  ಮೇಲೆ ವಿನ್ಯಾಸ ಪ್ರಕ್ರಿಯೆ ಆರಂಭವಾಗುತ್ತದೆ.ಹೆರಿಟೇಜ್ ಬೇಕು ಎಂದು  ಕೇಳಿದರೆ  ಹಳೆಯ ಕಾಲದ ರೀತಿಯಲ್ಲಿ ಒಳಾಂಗಣ ವಿನ್ಯಾಸ  ಮಾಡಲಾಗುತ್ತದೆ, ಅಂದರೆ, ಮನೆಯ ಪ್ರತಿಯೊಂದು ವಸ್ತುಗಳಲ್ಲಿ ನಿಮಗೆ ಹಳೆಯತನವನ್ನು ತೋರಿಸುವಂತೆ ಜಾನಪದ ಸೊಗಡನ್ನು ಬಿಂಬಿಸಲಾಗುತ್ತದೆ.ಸಮಕಾಲೀನ ಬಣ್ಣ. ಇಲ್ಲಿ ಆದಷ್ಟು ಅರ್ಧ ಬಿಳಿ ಮತ್ತು ಕ್ರೀಮ್ ಬಣ್ಣಗಳನ್ನು ಉಪಯೋಗಿಸಲಾಗಿರುತ್ತದೆ, ಮತ್ತು ಅದಕ್ಕೆ ಹೊಂದುವಂತಹ ಪೀಠೋಪಕರಣ ಮತ್ತು ಬಣ್ಣಗಳನ್ನು ಬಳಸಲಾಗಿರುತ್ತದೆ. ಪ್ಯೂಷನ್ ಥೀಮ್: ಸಾಂಪ್ರದಾಯಿಕ,  ಸಮಕಾಲೀನ ಮತ್ತು ಆಧುನಿಕ ವಿನ್ಯಾಸಗಳ ಹದವಾದ ಮಿಶ್ರಣ  (ಫ್ಯೂಷನ್ ಥೀಮ್) ಇದಾಗಿರುತ್ತದೆ.ಇಂದಿನ ಯುವಕರ ಮನಸ್ಥಿತಿಗೆ ಹೊಂದುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಅಂದರೆ, ಇಂದಿನ ಯುವ ಜನರು ಬೆಡ್ ರೂಮ್‌ನಲ್ಲಿ ಅತಿ ಹೆಚ್ಚು  ಇಷ್ಟ ಪಡುವ ರಾಕ್ ಸಂಗೀತದ ಗಿಟಾರ್, ಒಳಗೊಂಡಂತೆ ರೂಮ್‌ನ್ನು ಅಲಂಕಾರ ಮಾಡಲಾಗಿರುತ್ತದೆ.ಆದರೆ, ಬಹುತೇಕ ಸಂದರ್ಭದಲ್ಲಿ ಮಕ್ಕಳ ಕೋಣೆಗಳನ್ನು ವಿನ್ಯಾಸ ಮಾಡುವಾಗ ಮಕ್ಕಳಿಗೆ ಆಕರ್ಷಕವಾಗುವ ಗಾಢವಾದ ಬಣ್ಣಗಳನ್ನು ಇಲ್ಲಿ ಉಪಯೋಗಿಸಲಾಗುತ್ತದೆ. ಒಟ್ಟಿನಲ್ಲಿ  ಮನೆಯನ್ನು ಸುಂದರವಾಗಿ ಕಾಣು

ವಂತೆ ಮಾಡುವಲ್ಲಿ ಒಳಾಂಗಣ ವಿನ್ಯಾಸಕಾರರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ.

 ಮಾಹಿತಿಗೆ ಸಂಪರ್ಕಿಸಿ:  97390 68260

santhosh.bankapur@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry