ಶುಕ್ರವಾರ, ಜೂನ್ 18, 2021
22 °C

ಒಳ್ಳೆಯ ಸೊಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಚೇರಿ ಕಿರಿಕಿರಿಗಳಿಗೆ ಹೊಂದಿಕೊಳ್ಳುವ ಮಂದಿ ಬಂಧುಗಳೊಂದಿಗೆ ಹೊಂದಿಕೊಳ್ಳಲು ಹಿಂದೇಟು ಹಾಕುತ್ತಾರೆ, ಯಾಕೆ? ಈ ಪ್ರಶ್ನೆಯನ್ನಿಟ್ಟುಕೊಂಡು ಅವಿಭಕ್ತ ಕುಟುಂಬದ ಕತೆ ಹೇಳಲು ಹೊರಟಿದ್ದಾರೆ `ಸೊಸೆ ತಂದ ಸೌಭಾಗ್ಯ~ ನಿರ್ದೇಶಕ ರಾಮ್‌ಜೀ. ಅವರು ಈ ಮೊದಲು ಸಾಕಷ್ಟು ಧಾರಾವಾಹಿಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದರೂ, ಇದು ಅವರದೇ ಕತೆಯುಳ್ಳ ಧಾರಾವಾಹಿ. ಐಟಂ ಹಾಡೊಂದನ್ನು ಬಿಟ್ಟು ತಮ್ಮ ಧಾರಾವಾಹಿಯಲ್ಲಿ ಮತ್ತೆಲ್ಲಾ ಇದೆ ಎಂದ ರಾಮ್‌ಜೀಗೆ ತಮ್ಮ ಕತೆಯ ಬಗ್ಗೆ ಅಪಾರ ವಿಶ್ವಾಸ.ಕಿರುತೆರೆಯಲ್ಲಿ ಅತ್ತೆ- ಸೊಸೆ ಕತೆಗಳ ಧಾರಾವಾಹಿಗಳು ಬೇಕಾದಷ್ಟು ಬಂದಿವೆ. ಆದರೆ ರಾಮ್‌ಜೀ ಅವರ ಕಥನದ ಸೊಗಸೇ ಬೇರೆಯದಂತೆ.ಒಳ್ಳೆಯ ಸೊಸೆಯಾಗಿ ಅಭಿನಯಿಸುತ್ತಿರುವ ಸುಷ್ಮಾ ರಾವ್ `ಗುಪ್ತಗಾಮಿನಿ~ ಧಾರಾವಾಹಿ ಮುಗಿದ ಎರಡು ವರ್ಷಗಳ ನಂತರ ಮತ್ತೆ ಧಾರಾವಾಹಿಗಾಗಿ ಬಣ್ಣಹಚ್ಚಿದ್ದಾರೆ. ನಿರ್ದೇಶಕರ ವೃತ್ತಿಪರತೆಯನ್ನು ಮೆಚ್ಚಿಕೊಂಡ ಅವರು, ಕತೆಯನ್ನು ಜನ ಇಷ್ಟಪಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.ಹಿರಿಯ ನಟ ಸಿ.ಆರ್.ಸಿಂಹ ಅವರಿಗೆ ಅವಿಭಕ್ತ ಕುಟುಂಬದ ಯಜಮಾನನ ಪಾತ್ರ. ಅದನ್ನು ತಮ್ಮದೇ ತುಂಬು ಕುಟುಂಬದ ನೆನಪಿನೊಂದಿಗೆ ನಿರ್ವಹಿಸುತ್ತಿರುವುದಾಗಿ ಸಿಂಹ ಹೇಳಿದರು. `ಪ್ರತೀದಿನ ಶೂಟಿಂಗ್‌ಗೆ ಹೊರಡಬೇಕಾದರೆ ತಮ್ಮದೇ ಮತ್ತೊಂದು ಮನೆಗೆ ಹೋಗುತ್ತಿರುವಂತೆ ಅನ್ನಿಸುತ್ತದೆ. ಹಣಕ್ಕಿಂತ ಸಂಬಂಧಗಳು ಮುಖ್ಯ ಎಂಬುದನ್ನು ಹೇಳುವ ಈ ಧಾರಾವಾಹಿ ಯುವಜನಾಂಗಕ್ಕೆ ಪಾಠವಾಗಬೇಕು~ ಎನ್ನುವ ಅನಿಸಿಕೆ ಅವರದು. ಅಂದಹಾಗೆ ಈ ಧಾರಾವಾಹಿಯನ್ನು ಸೌಂದರ್ಯ ಅವರ ನೆನಪಿನಲ್ಲಿ ಅವರ ಪತಿ ರಘು ನಿರ್ಮಿಸುತ್ತಿದ್ದಾರೆ.ಮಾ.5ರಿಂದ ಝೀ ವಾಹಿನಿಯಲ್ಲಿ ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ `ಸೊಸೆ ತಂದ ಸೌಭಾಗ್ಯ~ ಪ್ರಸಾರವಾಗಲಿದೆ. ಮರೀನಾ ತಾರಾ, ನಿಖಿಲಾ, ಸಂತೋಷ್ ರಾಜ್, ವಿದ್ಯಾ ವೆಂಕಟರಾಮ್, ಶಿಶಿರ ಮುಂತಾದವರು ತಾರಾಗಣದಲ್ಲಿದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.