ಶುಕ್ರವಾರ, ಆಗಸ್ಟ್ 7, 2020
23 °C

`ಒಳ್ಳೆ ಭಾವದಿಂದ ಮಾತ್ರ ಭಗವಂತನ ಅನುಗ್ರಹ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಒಳ್ಳೆ ಭಾವದಿಂದ ಮಾತ್ರ ಭಗವಂತನ ಅನುಗ್ರಹ'

ಮುಧೋಳ: `ಸದ್ಭಾವದಿಂದ ದೇವರ ಕಾರ್ಯ ಮಾಡಬೇಕು' ಎಂದು ಉಡುಪಿಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮಿಜೀ ಹೇಳಿದರು.ಮುಧೋಳಕ್ಕೆ ಪರ್ಯಾಯ ಪೂರ್ವಭಾವಿ ಸಂಚಾರಕ್ಕಾಗಿ ಆಗಮಿಸಿ ರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ಅವರು ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ ವಿಪ್ರ ಸಮಾಜದ ಪರವಾಗಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಶಾಸಕ ಗೋವಿಂದ ಕಾರಜೋಳ, ಬ್ರಾಹ್ಮಣ ಸಮಾಜದಿಂದ ಸಾಕಷ್ಟು ಸಂಸ್ಕಾರ ಪಡೆದುಕೊಂಡಿದ್ದೇನೆ ಎಂದು ಹೇಳಿದರು.ಸಧರ್ಮ ಮಂಡಳಿಯ ಅಧ್ಯಕ್ಷ ಗುರುರಾಜ ಕಟ್ಟಿ, ಕಾರಜೋಳ ಅವರು ಸಚಿವರಾಗಿದ್ದಾಗ ರಾಜ್ಯದಾದ್ಯಂತ ಬ್ರಾಹ್ಮಣ ಸಮಾಜದ ಮಂದಿರ ಮಠಗಳಿಗೆ ಅನುದಾನ ನೀಡಿದ್ದಾರೆ ಎಂದು ಹೇಳಿದರು.ಮುಧೋಳ ಮಂಡಳ ಬಿಜೆಪಿ ಅಧ್ಯಕ್ಷ ಬಿ.ಎಚ್. ಪಂಚಗಾಂವಿ ಅವರನ್ನು ಶ್ರೀಗಳು ಸಮಾಜದ ಪರವಾಗಿ ಸನ್ಮಾನಿಸಿದರು. ಸುಭಾಸ ಮನಗೂಳಿ ರಚಿಸಿದ `ದಾಸ ಸಂಕೀರ್ತನೆ' ಕೃತಿಯನ್ನು ಶ್ರೀಗಳು ಬಿಡುಗಡೆ ಮಾಡಿದರು. ಪಾಂಡುರಂಗಾಚಾರ್ಯ ಜೋಶಿ, ಬಿಂದುಮಾಧವಾಚಾರ್ಯ ನಾಗಸಂಪಗಿ ಮಾತನಾಡಿದರು.ಶ್ರೀಗಳನ್ನು ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ರಾಘವೇಂದ್ರಸ್ವಾಮಿ ಸಭಾ ಭವನದ ವರೆಗೆ ಪೂರ್ಣಕುಂಭ, ಭಜನೆ, ಸಂಗೀತಸೇವೆ ಮೆರವಣಿಗೆ ಮುಖಾಂತರ ಕರೆತರಲಾಯಿತು.ಗಣ್ಯರಾದ ರಾಘವೇಂದ್ರ ದಿಡ್ಡಿ, ಸಂಜೀವ ಮೊಕಾಶಿ, ರವಿ ದೇಸಾಯಿ, ಸಂಜೀವ ದಿಡ್ಡಿ, ಜಿ.ಎನ್.ಜೋಶಿ, ರಾಘವೇಂದ್ರ ಜೇರೆ, ಎಂ,ಕೆ.ದೇಸಾಯಿ, ಆರ್.ಪಿ.ಜೋಶಿ, ಸೋನಪ್ಪಿ ಕುಲಕರ್ಣಿ ಉಪಸ್ಥಿತರಿದ್ದರು. ಗುರುರಾಜ ಕಟ್ಟಿ ಸ್ವಾಗತಿಸಿದರು. ಸಾಹಿತಿ ಆನಂದ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.