ಒಳ್ಳೆ ರಸ್ತೆ ನಿರ್ಮಿಸಲು ಏನು ತೊಂದರೆ?

7
ಬಿಡಿಎಗೆ ಹೈಕೋರ್ಟ್‌ ತರಾಟೆ

ಒಳ್ಳೆ ರಸ್ತೆ ನಿರ್ಮಿಸಲು ಏನು ತೊಂದರೆ?

Published:
Updated:

ಬೆಂಗಳೂರು: ‘ಸಿಂಧೂ ನಾಗರಿಕತೆಯ ಹರಪ್ಪ  ಮತ್ತು -ಮೊಹೆಂಜೊದಾರೊ ಸೇರಿದಂತೆ ಹಿಂದೆ ರಾಜರ ಆಳ್ವಿಕೆಯಲ್ಲಿ ನಿರ್ಮಾಣವಾದ ಉತ್ತಮ ರಸ್ತೆಗಳ ಮಾದರಿಗಳು ನಮ್ಮ ಮುಂದಿವೆ. ಅವುಗಳನ್ನು ಸ್ವಲ್ಪ ಗಮನಿಸಿ’ ಎಂದು  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ   ಮಂಗಳವಾರ ಹೈಕೋರ್ಟ್‌ ಕಿವಿಮಾತು ಹೇಳಿದೆ.ಸಮಗ್ರ ನಗರಾಭಿವೃದ್ಧಿ ಯೋಜನೆ–2015ಕ್ಕೆ (ಮಾಸ್ಟರ್‌ಪ್ಲಾನ್-೨೦೧೫) ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.­ವಘೇಲಾ ಹಾಗೂ ನ್ಯಾಯ­ಮೂರ್ತಿ ಬಿ.ವಿ.ನಾಗರತ್ನ ಅವರ ವಿಭಾ­ಗೀಯ ಪೀಠ, ಬೆಂಗಳೂರಿನಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುವತ್ತ ಬಿಡಿಎ ಗಮನ ಹರಿಸಬೇಕು  ಎಂದು ತಿಳಿಸಿದೆ.ರಾಜರ ಆಳ್ವಿಕೆಯಲ್ಲಿ ನಿರ್ಮಿಸಿದ್ದ ಮೈಸೂರಿನ ರಸ್ತೆಗಳು ಈಗಲೂ ಚೆನ್ನಾಗಿವೆ. ಅವುಗಳನ್ನು ನೋಡಿಯಾ­ದರೂ ಇಲ್ಲಿ  ಉತ್ತಮ ರಸ್ತೆಗಳ ನಿರ್ಮಾಣ ಹಾಗೂ ವಾಹನ ನಿಲುಗಡೆ ಸಂಕೀರ್ಣಗಳನ್ನು ನಿರ್ಮಾಣ ಮಾಡು­ವಂತೆ ಸೂಚನೆ ನೀಡಿದೆ.ನಾಲ್ಕು ಗೋಪುರಗಳ ಒಳ ಭಾಗದ­ಲ್ಲಿದ್ದ ಬೆಂಗಳೂರು, ಈಗ ಅವನ್ನೂ ಮೀರಿ ಬೆಳೆದಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಅಗತ್ಯ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ರಸ್ತೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದೆ.ಸರ್ಕಾರ ಹಮ್ಮಿಕೊಳ್ಳುವ ಯೋಜನೆ­ಗಳಿಗೆ ಕನಿಷ್ಠ ೨೦–೩೦ ವರ್ಷಗಳಷ್ಟು ದೂರದೃಷ್ಟಿ ಇರಬೇಕು. ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆಗಳಲ್ಲಿ ಜನ ವಸತಿ ಜತೆಗೆ ರಸ್ತೆ ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದ ಪೀಠ, ವಿಚಾರಣೆ­ಯನ್ನು ಇದೇ ೨೧ಕ್ಕೆ ಮುಂದೂಡಿತು.ನಗರದ ಈಜಿಪುರದಲ್ಲಿನ ಇಡ­ಬ್ಲೂ­ಎಸ್ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಮೇವರಿಕ್ ಹೋಲ್ಡಿಂಗ್ ಸಂಸ್ಥೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಅಲ್ಲಿನ ಜನರು ಸೂಕ್ತ ವಸತಿ ಸೌಲಭ್ಯ­ವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ವಸತಿ ಕಲ್ಪಿಸಲು ಅನುಮತಿ ನೀಡುವಂತೆ ಬಿಡಿಎಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದರ ವಿಚಾರಣೆಯೂ 21ಕ್ಕೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry