ಒಳ ಮೀಸಲಾತಿ ವಿವಾದವೀಗ ಮುಗಿದ ಅಧ್ಯಾಯ ಖುರ್ಷಿದ್

7

ಒಳ ಮೀಸಲಾತಿ ವಿವಾದವೀಗ ಮುಗಿದ ಅಧ್ಯಾಯ ಖುರ್ಷಿದ್

Published:
Updated:

 

ಫರೂಕಾಬಾದ್ (ಪಿಟಿಐ): ಮುಸ್ಲೀಂರ ಒಳ ಮಿಸಲಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿ, ಚುನಾವಣಾ ಆಯೊಗದ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರದ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು, ಈಗ  ಒಳ ಮಿಸಲಾತಿ ವಿವಾದ ಮುಗಿದ ಅಧ್ಯಾಯ ಎಂದು ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿವಾದದ ಕುರಿತು ಸಚಿವರ ವಿವರಣೆ ಬಯಸಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಚಿವರು, ~ಈಗ ಒಳ ಮೀಸಲಾತಿ ವಿವಾದ ಮುಗಿದ ಅಧ್ಯಾಯ~ ಎಂದಿದ್ದಾರೆ.

ಉತ್ತರ ಪ್ರದೇಶದ ಫರೂಕಾಬಾದ್ ನಿಂದ ವಿಧಾನ ಸಬೆಗೆ ಸ್ಪರ್ಧಿಸಿರುವ ತಮ್ಮ ಪತ್ನಿ ಲೂಯಿಸ್ ಖುರ್ಷಿದ್ ಅವರ ಪರ ಚುನಾವಣಾ ಸಭೆಯಲ್ಲಿ ಭಾವಹಿಸಲು ಸಚಿವ ಖುರ್ಷಿದ್ ಅವರು, ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರೊಂದಿಗೆ ಮಂಗಳವಾರ ಇಲ್ಲಿಗೆ ಬಂದಿದ್ದರು.

ಈಚೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಸ್ಲೀಂರ ಒಳಮಿಸಲಾತಿ ಕುರಿತ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಚುನಾವಣಾ ಆಯೋಗವು ಈ ಸಂಬಂಧ ರಾಷ್ಟ್ರಪತಿಗಳಿಗೆ ದೂರು ನೀಡಿತ್ತು.

ಸೋಮವಾರ ಸಂಜೆ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ ಸಚಿವರು ಆಯೋಗಕ್ಕೆ ಆ ಸಂಬಂಧ  ಚುನಾವಣಾ ಆಯೊಗಕ್ಕೆ ಕ್ಷಮಾಪಣಾ ಪತ್ರ ಸಲ್ಲಿಸಿದ್ದರು. ಸಚಿವರ ಪತ್ರದ ಕುರಿತು ತಾನು ಇನ್ನೂ ಯಾವ ಕ್ರಮವನ್ನು ಜರುಗಿಸಿಲ್ಲ ಎಂದು ಚುನಾವಣಾ ಆಯೋಗ ಮಂಗಳವಾರ ಬೆಳಿಗ್ಗೆ ತಿಳಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry