ಬುಧವಾರ, ಮೇ 12, 2021
20 °C
ಒಳಾಂಗಣ ಕ್ರೀಡಾಕೂಟ

ಒಸಿಎ ಧ್ವಜದಡಿ ಸ್ಪರ್ಧಿಸಲಿರುವ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಒಸಿಯಿಂದ  ಅಮಾನತಿಗೆ ಒಳಗಾಗಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಅಥ್ಲೀಟ್‌ಗಳು ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ನಡೆಯಲಿರುವ `ನಾಲ್ಕನೇ ಏಷ್ಯನ್ ಒಳಾಂಗಣ ಕ್ರೀಡಾಕೂಟ'ದಲ್ಲಿ ಏಷ್ಯಾ  ಒಲಿಂಪಿಕ್ ಸಮಿತಿ (ಒಸಿಎ) ಧ್ವಜದಡಿಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದಾರೆ.ಜೂನ್ 29 ರಿಂದ ಜುಲೈ ಆರರ ವರೆಗೆ ಈ ಕೂಟದಲ್ಲಿ ನಡೆಯಲಿದೆ. ಈ ಕೂಟದಲ್ಲಿ ನಾಲ್ಕು ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲಿರುವ ಭಾರತದ 35 ಅಥ್ಲೀಟ್‌ಗಳು, ಅವರ ಜೊತೆಯಲ್ಲಿರಲಿರುವ 11 ಅಧಿಕಾರಿಗಳಿಗೆ ಸರ್ಕಾರದ ಅನುಮತಿ ದೊರೆತಿದೆ. ಇದರಲ್ಲಿ ಬಹುತೇಕರು ತಮ್ಮ ಸ್ವಂತ ಖರ್ಚನ್ನು ಭರಿಸಿ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.`ಭಾರತದ ಅಥ್ಲೀಟ್‌ಗಳು ಕೂಟದಲ್ಲಿ ಒಸಿಎ ಧ್ವಜದಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು  ಒಸಿಎ ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.