ಓಂಟಾರಿಯೋ ಈಜಿದ ಮೈಸೂರಿನ ಮಧು

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಓಂಟಾರಿಯೋ ಈಜಿದ ಮೈಸೂರಿನ ಮಧು

Published:
Updated:
ಓಂಟಾರಿಯೋ ಈಜಿದ ಮೈಸೂರಿನ ಮಧು

ಮೈಸೂರು: `ಇಡೀ ರಾತ್ರಿ ನಾನು ಮಲಗಿಲ್ಲ. ನನ್ನ ಮಗ ಗುರಿ ಮುಟ್ಟಲಿ, ದೇವರು ಅವನಿಗೆ ಶಕ್ತಿ ಕೊಡಲಿ, ಅವನ ಸಾಧನೆ ಯುವಜನರಿಗೆ ಸ್ಫೂರ್ತಿಯಾಗಲಿ ಎಂದು ಬೇಡಿಕೊಂಡಿದ್ದು, ಕೊನೆಗೂ ಸಫಲವಾಯಿತು~-

ಮೈಸೂರಿನ ಸರಸ್ವತಿಪುರಂನ ಆ ಮನೆಯ `ಅಮ್ಮ~ ಸುಶೀಲಾ ನಾಗರಾಜ್ ಅವರ ಕಂಗಳಲ್ಲಿ ಆನಂದಭಾಷ್ಪದ ಸೆಲೆಯೊಡೆದಿತ್ತು.ಸಾವಿರಾರು ಕಿಲೋಮೀಟರ್ ದೂರದಲ್ಲಿ ಇರುವ ಉತ್ತರ ಅಮೆರಿಕದ ಓಂಟಾರಿಯೊ ಸರೋವರವನ್ನು ಭಾನುವಾರ ಈಜಿದ ಸಾಹಸಿ ಮಧು ನಾಗರಾಜ್ ಅವರ ಹೆಮ್ಮೆಯ ತಾಯಿ ಸುಶೀಲಾ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಫೇಸ್‌ಬುಕ್‌ನಲ್ಲಿ ತಮ್ಮ ಪುತ್ರ ಮಧು ಮತ್ತು ಆತನ ತಂಡದವರು ಕಳಿಸಿದ ವಿವರಗಳನ್ನು, ಸಂದೇಶಗಳನ್ನು  `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.ಜಗತ್ತಿನ 14ನೇ ದೊಡ್ಡ ಸರೋವರವಾಗಿರುವ ಓಂಟಾರಿಯೋವನ್ನು  ಈಜುವುದು ಜಗತ್ತಿನಲ್ಲಿಯೇ ಅತ್ಯಂತ ಕಠಿಣ ಸವಾಲು.  ಆದರೆ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ ಜಗತ್ತಿನ 50ನೇ ಈಜುಗಾರ ಎಂಬ ಹೆಗ್ಗಳಿಕೆ ಕನ್ನಡಿಗ ಮಧು ನಾಗರಾಜ್ ಅವರಿಗೆ ಸಂದಿದೆ. 41.2 ಕಿಲೋಮೀಟರ್ ಅಂತರವನ್ನು ಅವರು 24 ತಾಸು, 26ನಿಮಿಷಗಳಲ್ಲಿ ಪೂರೈಸಿದ್ದಾರೆ.ಶನಿವಾರ ರಾತ್ರಿ 9.08ಕ್ಕೆ (ಭಾರತೀಯ ಕಾಲಮಾನ) ಪೋರ್ಟ್ ಡಾಲ್‌ಹೌಸಿಯಿಂದ ತಮ್ಮ ಈಜು ಅಭಿಯಾನ ಅರಂಭಿಸಿದ ನಾಗರಾಜ್ ಅವರನ್ನು ತಂಡದ 12 ಸದಸ್ಯರು ಬೋಟ್‌ನಲ್ಲಿ ಹಿಂಬಾಲಿಸಿದರು. ಭಾನುವಾರ ಈಜು ಆರಂಭಿಸಿದ್ದ ಇನ್ನೊಬ್ಬ ಈಜುಗಾರ್ತಿ ಫ್ರ್ಯಾಂಕೋಸ್ ಹೆಮೆಲ್, ಎಡತೋಳಿನ ಸೆಳೆತದ ತೊಂದರೆಯಿಂದ ಪೂರ್ತಿ ಅಂತರವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಆದರೆ ಮಧು ನಾಗರಾಜ್ ತೀವ್ರ ಬಸವಳಿದಿದ್ದರೂ ಛಲ ಬಿಡದೇ ಗುರಿ ಮುಟ್ಟಿದರು. ಈ ಸಾಧನೆಗಾಗಿ ಅವರು ಸುಮಾರು 10 ತಿಂಗಳ ತರಬೇತಿ ಪಡೆದಿದ್ದರು.ಮೂಲತಃ ಮೈಸೂರಿನ 42 ವರ್ಷ ವಯಸ್ಸಿನ  ಮಧು ನಾಗರಾಜ್ ಅವರು ಅಮೆರಿಕದ ಕಾರ್ಪೋರೇಟ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. 2004ರಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು 12 ತಾಸು, 31 ನಿಮಿಷದಲ್ಲಿ ಈಜಿ ಸಾಹಸ ಮೆರೆದಿದ್ದರು. ಈಚೆಗೆ ನಡೆದ ಸಹಾರಾ ಮರುಭೂಮಿ ಮ್ಯಾರಥಾನ್‌ನಲ್ಲಿ (250 ಕಿ.ಮೀ) ಕೂಡ ಭಾಗವಹಿಸಿ ಗುರಿ ಮುಟ್ಟಿದ್ದರು.ಶಾಲಾ ವಿದ್ಯಾರ್ಥಿಯಾಗಿದ್ದಾಗ ಮೈಸೂರಿನ ಸರಸ್ವತಿಪುರಂ ಈಜುಗೊಳದಲ್ಲಿ ಈಜು ಕಲಿತಿದ್ದ ಅವರು, ಯುವರಾಜ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಸತತ ಮೂರು ವರ್ಷ ಮೈಸೂರು ವಿಶ್ವವಿದ್ಯಾಲಯದ ಈಜು ಚಾಂಪಿಯನ್ ಆಗಿದ್ದರು. ಎಂ.ಎಸ್ಸಿ. ಬಯೊ ಕೆಮಿಸ್ಟ್ರಿ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕದಲ್ಲಿ ಕಾರ್ಪೋರೇಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಆರಂಭದಲ್ಲಿ ಅಮೆರಿಕದ ಈಜು ಕ್ಲಬ್‌ನಲ್ಲಿ ಇವರ ಸಾಮರ್ಥ್ಯ ಗುರುತಿಸಿದ ಸಹೋದ್ಯೋಗಿ ಮಿತ್ರರು ಇಂಗ್ಲಿಷ್ ಕಡಲ್ಗಾಲುವೆ ಈಜು ಎಂದು ಸಲಹೆ ನೀಡಿದ್ದರು. ಅದಕ್ಕಾಗಿ ಅವರು ಒಂದು ವರ್ಷ ತರಬೇತಿ ಪಡೆದು, ಇಂಗ್ಲಿಷ್ ಕಡಲ್ಗಾಲುವೆ ಈಜಿನ ಪ್ರಥಮ ಕನ್ನಡಿಗರಾದರು.ಇದೀಗ ಅವರು ತಮ್ಮ ಪತ್ನಿ ಡಾ. ಸುಮನ್, ಮಗ ವಿವೇಕ್ (9ವರ್ಷ) ಮತ್ತು ಮೇಘನಾ (3 ವರ್ಷ) ಅವರೊಂದಿಗೆ ಅಮೆರಿಕದಲ್ಲಿಯೇ ಇದ್ದು, ಓಂಟಾರಿಯೋ ಸವಾಲನ್ನೂ ಎದುರಿಸಿದ ಸಂತಸದಲ್ಲಿ ತೇಲಾಡುತ್ತಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry