ಸೋಮವಾರ, ಜೂನ್ 21, 2021
21 °C

ಓಕಳಿಪುರಂ ಜಂಕ್ಷನ್‌ನಿಂದ ಖೋಡೆ ವೃತ್ತ:ಸಂಚಾರಕ್ಕೆ ಬದಲಿ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಓಕಳಿಪುರಂ ಜಂಕ್ಷನ್‌ನಿಂದ ಖೋಡೆ ವೃತ್ತದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನ ಸವಾರರು ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ನಗರ ಸಂಚಾರ ವಿಭಾಗದ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ಲಾಟ್ ಫಾರಂ ರಸ್ತೆ ಕಡೆಯಿಂದ ರಾಜಾಜಿನಗರ ಪ್ರವೇಶ ದ್ವಾರದ ಕಡೆ ಸಂಚರಿಸುವ ವಾಹನಗಳು ಓಕಳಿಪುರಂ ಜಂಕ್ಷನ್‌ನ ಮೂಲಕ ಮೈಸೂರು ರಸ್ತೆ ಮಾರ್ಗವಾಗಿ ಚಲಿಸಿ ಮಿನರ್ವ ಮಿಲ್ ಬಳಿ ಬಲ ತಿರುವು ಪಡೆದು ವಾಟಾಳ್ ನಾಗರಾಜ್ ರಸ್ತೆಗೆ ಸೇರಿ ಮುಂದೆ ಸಂಚರಿಸಬೇಕು.ಮಾಗಡಿ ಮುಖ್ಯರಸ್ತೆ ಕಡೆಯಿಂದ ಪ್ಲಾಟ್ ಫಾರಂ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಮಾಗಡಿ ರಸ್ತೆ ಮುಖಾಂತರ ಸಾಗಿ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಬಲ ತಿರುವು ಪಡೆದು ಪ್ಲಾಟ್ ಫಾರಂ ರಸ್ತೆ ಕಡೆಗೆ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.