ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್:ಎಸ್‌ಎಐಗೆ ಮಣಿದ ಐಎಎಫ್

7

ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್:ಎಸ್‌ಎಐಗೆ ಮಣಿದ ಐಎಎಫ್

Published:
Updated:
ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್:ಎಸ್‌ಎಐಗೆ ಮಣಿದ ಐಎಎಫ್

ಬೆಂಗಳೂರು:  ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್~ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3-2ಗೋಲುಗಳಿಂದ ಐಎಎಫ್ ಎದುರು ಗೆಲುವು ಪಡೆಯಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಸಂದೀಪ್ ಎರಡು ಗೋಲುಗಳನ್ನು ಗಳಿಸಿ ಗಮನ ಸೆಳೆದರು. ಆ ಗೋಲುಗಳು 18 ಹಾಗೂ 56ನೇ ನಿಮಿಷದಲ್ಲಿ ಬಂದವು. ಇದಕ್ಕೂ ಮುನ್ನ ಎಂ. ನವೀನ್ 6ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು.ಕ್ರೀಡಾ ಪ್ರಾಧಿಕಾರ ವಿರಾಮದ ವೇಳೆಗೆ 2-0ರಲ್ಲಿ ಮುನ್ನಡೆ ಹೊಂದಿತ್ತಾದರೂ, ಐಎಎಫ್ ಸಹ ಇದಕ್ಕೆ ಸಮರ್ಥ ಪೈಪೋಟಿ ಒಡ್ಡಿತು. ಈ ತಂಡದ ಸನ್ವರ್ ಅಲಿ 45ನೇ ನಿಮಿಷ ಹಾಗೂ ರಮೀಂದರ್ ಸಿಂಗ್ 53ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಆದರೆ, ಐಎಎಫ್ ಗೆಲುವಿಗೆ ಈ ಪ್ರಯತ್ನ ಸಾಕಾಗಲಿಲ್ಲ.ಒಎನ್‌ಜಿಸಿಗೆ ಜಯ: ಸಾಕಷ್ಟು ಪೈಪೋಟಿ ಎದುರಿಸಿಯೂ ಒಎನ್‌ಜಿಸಿ ತಂಡ ದಿನದ ಇನ್ನೊಂದು ಪಂದ್ಯದಲ್ಲಿ 5-3ಗೋಲುಗಳಿಂದ ಐಒಸಿಎಲ್ ಎದುರು ಗೆಲುವು ಸಾಧಿಸಿತು.ಈ ಗೆಲುವಿನಲ್ಲಿ ರಮೀಂದರ್ ಸಿಂಗ್ ಪ್ರಮುಖ ಪಾತ್ರ ವಹಿಸಿದರು. ವಿಜಯಿ ತಂಡದ ದಿವಾಕರ್ ರಾಮ್ ಹಾಗೂ ಮನ್‌ದೀಪ್ ಅಂಟಿಲ್ ಕ್ರಮವಾಗಿ 6 ಮತ್ತು 20ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದಕ್ಕೆ ತಕ್ಕ ಪ್ರತಿರೋಧ ತೋರಿದ ಐಒಸಿಎಲ್ ತಂಡದ ದೀಪಕ್ ಠಾಕೂರ್ (30 ಹಾಗೂ 69ನೇ ನಿ) ಗೋಲು ತಂದಿತ್ತರು.ಆಗ ವಿಜಯಿ ತಂಡದ ಲಲಿತ್ ಉಪಾಧ್ಯ 48ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 3-2ಕ್ಕೆ ಹೆಚ್ಚಿಸಿದರು. ಇದರಿಂದ ಮತ್ತೆ ಪೈಪೋಟಿ ಕಂಡುಬಂದಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಐಒಸಿಎಲ್‌ನ ಗುರ್ಜಿಂದರ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ 84ನೇ ನಿಮಿಷದಲ್ಲಿ ಚೆಂಡಿಗೆ ಗೋಲಿನ ಹಾದಿ ತೋರಿಸಿ 3-3ರಲ್ಲಿ ಸಮಬಲ ಸಾಧಿಸಿದರು.ಕೊನೆಯಲ್ಲಿ ಚುರುಕಿನ ಪ್ರದರ್ಶನ ನೀಡಿದ ರಮೀಂದರ್ 52ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 4-3ಕ್ಕೆ ಹೆಚ್ಚಿಸಿದರು. ಈ ಗೋಲು ಬಂದು ಹತ್ತು ನಿಮಿಷಗಳ ಅಂತರದಲ್ಲಿ ಪ್ರೀತಿಂದರ್ ಸಿಂಗ್ ನೀಡಿದ್ದ ಪಾಸ್‌ನ ನೆರವು ಪಡೆದು ರಮಣದೀಪ್ 62ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಅಷ್ಟೇ ಅಲ್ಲ ಸೋಲಿನ ಆತಂಕದಿಂದ ತಂಡವನ್ನು ಪಾರು ಮಾಡಿದರು.ರಮಣದೀಪ್ ಹತ್ತು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿದ್ದು, ಎದುರಾಳಿ ತಂಡದ ರಕ್ಷಣಾ ವಿಭಾಗದ ಒತ್ತಡವನ್ನು ಹೆಚ್ಚಿಸಿತು. ದ್ವಿತೀಯಾರ್ಧದ ಆರಂಭದಲ್ಲಿ ಐಒಸಿಎಲ್‌ನ ಪ್ರಭ್ಜೋತ್ ಸಿಂಗ್, ರೋಷನ್ ಮಿಂಜ್ ಗೋಲು ಗಳಿಸಲು ನಡೆಸಿದ ಯತ್ನಗಳು ಸಾಕಾಗಲಿಲ್ಲ.  ಒಎನ್‌ಜಿಸಿ ಒಟ್ಟು 21 ಪಾಯಿಂಟ್ಸ್ ಗಳಿಸಿದ್ದರೆ,  ಐಒಸಿಎಲ್ 19 ಪಾಯಿಂಟ್ಸ್ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry