ಓಣಂ 5ದಿನಗಳ ಸಂತೆ, ಶಾಲಾ ಕೊಠಡಿ ಉದ್ಘಾಟನೆ

ಬುಧವಾರ, ಮೇ 22, 2019
29 °C

ಓಣಂ 5ದಿನಗಳ ಸಂತೆ, ಶಾಲಾ ಕೊಠಡಿ ಉದ್ಘಾಟನೆ

Published:
Updated:

ಕೃಷ್ಣರಾಜಪುರ: ದೂರವಾಣಿ ನಗರ ಕೇರಳ ಸಮಾಜದ ವತಿಯಿಂದ ಜ್ಯುಬಿಲಿ ಶಾಲಾ ಆವರಣದಲ್ಲಿ ಓಣಂ ಹಬ್ಬದ ನಿಮಿತ್ತ ಆಯೋಜಿಸಿರುವ ಐದು ದಿನಗಳ ಸಂತೆ ಹಾಗೂ ಶಾಲಾ ಹೆಚ್ಚುವರಿ ಕೊಠಡಿಗಳನ್ನು ಬಿಬಿಎಂಪಿ ಸದಸ್ಯ ಎನ್.ಬಸವರಾಜು ಉದ್ಘಾಟಿಸಿದರು.`ಕೆಳ- ಮಧ್ಯಮ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳು ಆಸರೆಯಾಗಬೇಕು. ಶಾಲೆಯಲ್ಲಿ ಓದುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಮಾಹಿತಿ ನೀಡಿದರೆ 10ನೇ ತರಗತಿವರೆಗೆ ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.`ಕೃಷ್ಣರಾಜಪುರ ಭಾಗದಲ್ಲಿ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಿದರೆ ಐಕ್ಯತೆ ಸಾಧಿಸಿದಂತಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳ ವಿನಿಮಯದಿಂದ ಮಾತ್ರ ಸುಮಧುರ ಬಾಂಧವ್ಯಕ್ಕೆ ಒತ್ತು ನೀಡಿದಂತೆ ಆಗುತ್ತದೆ~ ಎಂದು ಅಭಿಪ್ರಾಯಪಟ್ಟರು.

 

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪೀಟರ್ ಜಾರ್ಜ್ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಜಿ.ಎ. ಮುನಿರಾಜು, ಶಾಲೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡೆನ್ನಿಸ್ ಬಾಲ್, ಸದಸ್ಯರಾದ ಗಿರೀಶ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry