ಓದಿನೊಂದಿಗೆ ಮೋಜು, ಮಸ್ತಿ

7

ಓದಿನೊಂದಿಗೆ ಮೋಜು, ಮಸ್ತಿ

Published:
Updated:

ಓದಿನೊಂದಿಗೆ ಒಂದಿಷ್ಟು ಮೋಜು ಮಾಡುವ ಸಮಯ. ಕಾಲೇಜು ತುಂಬೆಲ್ಲಾ ಸಂಭ್ರಮದ ವಾತಾವರಣ. ವಿದ್ಯಾರ್ಥಿಗಳಿಗೆ ಸ್ಪರ್ಧೆಯೊಂದಿಗೆ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶ... ಇದಕ್ಕೆಲ್ಲಾ ವೇದಿಕೆ ಒದಗಿಸಿದ್ದು ಕೆ.ಎಲ್.ಇ ಕಾಲೇಜಿನ `ಎನ್ಸೆಂಬಲ್ 2012~ ಉತ್ಸವ.ಇತ್ತೀಚೆಗಷ್ಟೆ ಕೆ.ಎಲ್.ಇ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸಂಸ್ಥೆ ಎರಡು ದಿನಗಳ ರಾಜ್ಯ ಮಟ್ಟದ ಉತ್ಸವವನ್ನು ಹಮ್ಮಿಕೊಂಡಿತ್ತು. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಕೇವಲ ಬೆಂಗಳೂರಿಗರಷ್ಟೇ ಅಲ್ಲದೆ ಕರ್ನಾಟಕದಾದ್ಯಂತ 22 ಕಾಲೇಜುಗಳನ್ನು ಪ್ರತಿನಿಧಿಸಿ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಇದು 12ನೇ ವರ್ಷದ ಉತ್ಸವ.ಇದೇ ಫೆಬ್ರುವರಿ 19ರಂದು ನಡೆದ ಈ ಉತ್ಸವದ ಉದ್ಘಾಟನಾ ಸಮಾರಂಭವನ್ನು ಎಂಬಾರ್ಕರ್ಸ್‌ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ಡಾ.ಸಮೀರ್ ಕಾಗಲ್ಕರ್ ನಡೆಸಿಕೊಟ್ಟರು. ಎರಡು ದಿನ ನಡೆದ ಈ ಉತ್ಸವದಲ್ಲಿ ವಿವಿಧ ಹಂತಗಳ ಒಟ್ಟು ಐದು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದು ಸ್ಪರ್ಧೆ ಮಾತ್ರವಾಗಿರದೆ ನಮಗೆಲ್ಲಾ ಸಂತೋಷದ ಕ್ಷಣಗಳಾಗಿದ್ದವು ಎಂದು ವಿದ್ಯಾರ್ಥಿಗಳು ತಮ್ಮ ಹರ್ಷ ವ್ಯಕ್ತಪಡಿಸಿದರು.ಅಷ್ಟೇ ಅಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಲುವಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಮತ್ತು ಅನೇಕ ನೃತ್ಯ ಸ್ಪರ್ಧೆಗಳಂತೂ ವಿದ್ಯಾರ್ಥಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದವು. ಈ ಕಾರ್ಯಕ್ರಮಕ್ಕೆ ರೇಡಿಯೋ ಮಿರ್ಚಿಯ `ಬೀಟ್ ರಾಜ~ ರಾಜ್ ಆಗಮಿಸಿದ್ದು ವಿದ್ಯಾರ್ಥಿಗಳ ಇನ್ನಷ್ಟು ಸಂಭ್ರಮಕ್ಕೆ ಕಾರಣವಾಯಿತು.ವಿವಿಧ ಕ್ಷೇತ್ರಗಳ ಪರಿಣತರಾದ ಆರ್‌ಜೆ ಪ್ರೀತಿ, ಯಾಸ್ಮಿನ್, ರೋಶ್ನಿ ಕಾಂತ್, ಸಂಧ್ಯಾ ರವಿ, ಶ್ರೀಧರ್, ನಯನ ಮುಂತಾದವರು ಕಾರ್ಯಕ್ರಮಕ್ಕೆ  ತೀರ್ಪುಗಾರರಾಗಿದ್ದರು. 

ಸಂತಸದೊಂದಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಾಗಿದ್ದ ಈ ಕಾರ್ಯಕ್ರಮದ ಮುಕ್ತಾಯ ಸಮಾರಂಭ ಫೆಬ್ರುವರಿ 20ರಂದು ನಡೆಯಿತು. ಮುಕ್ತಾಯ ಸಮಾರಂಭವನ್ನು ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ನಡೆಸಿಕೊಟ್ಟರು. ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ದೊರೆ ಭಗವಾನ್, ಸಾಯಿ ಗೋಲ್ಡ್ ಪ್ಯಾಲೇಸ್‌ನ ಟಿ.ಎ. ಶರವಣ, ನಟ ದಿಗಂತ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.`ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ತುಂಬಾ ಮುಖ್ಯ. ಈ ಹಂತದಲ್ಲೇ ಪ್ರಾಮಾಣಿಕತೆ, ಪರಿಶ್ರಮ ಎರಡನ್ನೂ ಮೈಗೂಡಿಸಿಕೊಂಡರೆ ಖಂಡಿತ ಜೀವನದಲ್ಲಿ ಯಶಸ್ಸು ದೊರೆಯುತ್ತದೆ~ ಎಂದು ವಿದ್ಯಾರ್ಥಿಗಳಿಗೆ ಅತಿಥಿಗಳು ಕಿವಿಮಾತು ಹೇಳಿದರು.ಯುವಜನರಿಗೆ ಉತ್ತಮ ಶಿಕ್ಷಣ, ಪರಿಸರ ಮತ್ತು ಅವಕಾಶವನ್ನು ಒದಗಿಸುವಲ್ಲಿ ಕೆ.ಎಲ್.ಇ ಮುನ್ನಡೆಯುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ಓದಿನಿಂದಷ್ಟೇ ಅಲ್ಲ, ತಮ್ಮ ಸುತ್ತ ಮುತ್ತಲ ಪರಿಸರದಿಂದಲೂ ತಿಳಿಯಬೇಕಾದ್ದು ಬೇಕಾದಷ್ಟಿರುತ್ತದೆ. ಈ ನಿಟ್ಟಿನಲ್ಲಿ ಕೆ.ಎಲ್.ಇ ಕೂಡ ಶ್ರಮಿಸುತ್ತಿದೆ ಎಂದವರು ದೊರೆ ಭಗವಾನ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry