ಓದುಗರ ಪತ್ರ

7

ಓದುಗರ ಪತ್ರ

Published:
Updated:

ಮಲ್ಲಿಕಾರ್ಜುನ ಹಿರೇಮಠರ `ಮೂರು ಸಂಜಿ ಮುಂದ ಧಾರವಾಡ~ (ಜ.29) ಪ್ರಬಂಧ ವರಕವಿ ದ.ರಾ .ಬೇಂದ್ರ ಅವರ ಜನ್ಮದಿನದ ನೆಪದಲ್ಲಿ ಮೂಡಿಬಂದು ಖುಷಿನೀಡಿತು. ಲೇಖನದಲ್ಲಿ ಧಾರವಾಡದ ವರ್ತಮಾನ, ಭೂತ ಹಾಗೂ ಭವಿಷ್ಯದ ಕಾಲಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಹಿರೇಮಠರು ಧಾರವಾಡವನ್ನು ಕಾವ್ಯ ಭಾಷೆಯಲ್ಲಿ ಸೆರೆಹಿಡಿದಿದ್ದಾರೆ. ನೆನಪುಗಳನ್ನು ಮೀಟಿದ ಅವರಿಗೆ ಧನ್ಯವಾದಗಳು.

-ಕೆ. ಗವಿಸಿದ್ಧಮ್ಮ , ಕೊಪ್ಪಳ; ಎ.ಕೆ.ಮಂಜುಳಾ, ಕೊಪ್ಪಳ; ಸುರೇಶ್, ಬಸವೇಶ್ವರ ನಗರ; ಯಂಕಪ್ಪ ಜಿ ಬುರಡಿ, ಬಿ.ಹೊಸಳ್ಳಿ; ಪವನಕುಮಾರ ವಿ, ಕಲ್ಯಾಣನಗರ; ಶ್ರುತಿ ಈರನಗೌಡ, ಪಿಲಕಮುಖಿ; ಹನುಮಪ್ಪ ಎಮ್ ಮೈನಳ್ಳಿ, ವಳೂರು; ಎಸ್.ಎಂ.ಕಂಬಾಳಿಮಠ, ಕೊಪ್ಪಳ; ಗವಿ ಎಂ ಹುಲಕೋಟೆ, ಬೋಚನಹಳ್ಳಿ; ಜಿ.ಎಂ.ಹಿರೇಮಠ, ಕೊಪ್ಪಳ; ಮಲ್ಲಿಕಾರಸಿದ್ಧ ಚಿನ್ಮಳ್ಳಿ, ಗುಲ್ಬರ್ಗಾ

`ಕಲೆ, ಕ್ರೌರ್ಯ ಹಾಗೂ ಕಾಂಬೋಡಿಯಾ~ ಬರಹ ಮನಸ್ಸಿಗೆ ಮುಟ್ಟಿತು. ವಿದೇಶಿಗರ ದಬ್ಬಾಳಿಕೆಯಿಂದ ಉಂಟಾದ ಸಾಂಸ್ಕೃತಿಕ-ಸಾಮಾಜಿಕ ಹಾನಿಯನ್ನು ತಿಳಿದು ಬೇಸರವಾಯಿತು. ಡಾ.ಆಶಾ ಬೆನಕಪ್ಪ ಅವರ `ಅಂತಃಕರಣ~ ಅಂಕಣ ಸೊಗಸಾಗಿ ಮೂಡಿಬರುತ್ತಿದೆ.

-ಬಿ.ಎಸ್.ಮುಳ್ಳೂರ, ಹಲಗತ್ತಿ

 `ನನ್ನ ಅಪ್ಪಾಜಿ~ (ಡಾ.ಆಶಾ ಬೆನಕಪ್ಪ- ಅಂತಃಕರಣ) ಲೇಖನ ಅಂಕಣಕಾರ್ತಿ ಮತ್ತು ಅವರ ತಂದೆಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿತು. ಬೆನಕಪ್ಪನವರದು ಸ್ಫೂರ್ತಿದಾಯಕ ಯಶೋಗಾಥೆ. 

-ಬಾ.ರಂ.ಸುರೇಶ್, ಶಿವಮೊಗ್ಗ

ವಿ.ಎಸ್.ಎಸ್. ಶಾಸ್ತ್ರಿ ಅವರನ್ನು ಕುರಿತ ಕೆ. ನರಸಿಂಹಮೂರ್ತಿ ಅವರ ಬರಹ ಉತ್ತಮ ವ್ಯಕ್ತಿಚಿತ್ರಕ್ಕೊಂದು ಮಾದರಿ. ಕರಿಯು ಕನ್ನಡಿಯಲ್ಲಿ ಅಡಗಿದಂತೆ ಶಾಸ್ತ್ರಿ ಅವರ ಸಮಗ್ರ ವ್ಯಕ್ತಿತ್ವ ಲೇಖನದಲ್ಲಿ ಅಡಕಗೊಂಡಿದೆ. 

 -ರುದ್ರೇಶ್ ಬಿ. ಅದರಂಗಿ, ಬೆಂಗಳೂರು

ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಗಣಿತ ವಿಜ್ಞಾನದಲ್ಲಿ ಆಸಕ್ತಿಯಿಂದ ಸೃಜನಾತ್ಮಕ ಚಟುವಟಿಕೆ ಮಾಡುತ್ತಿರುವ ಕೋಲಾರದ ಶಿವಶಂಕರ ಶಾಸ್ತ್ರಿ ಅವರ ವ್ಯಕ್ತಿತ್ವದ ಪರಿಚಯ ಸೊಗಸಾಗಿದೆ. ಕಾಗದದ ಮೂಲಕ ಮಕ್ಕಳಿಗೆ ಆಸಕ್ತಿಯಿಂದ ಪಾಠ ಮಾಡುವ ಇವರ ಕಲೆ ಶಿಕ್ಷಕರಿಗೂ ಅನುಕರಣೀಯ.

-ಸುರೇಶ ಅಂಗಡಿ, ಹೂವಿನ ಹಡಗಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry