ಓದುವ ಹವ್ಯಾಸ ಬೆಳೆಸಿಕೊಳ್ಳಲು ಶ್ರೀಗಳ ಸಲಹೆ

7

ಓದುವ ಹವ್ಯಾಸ ಬೆಳೆಸಿಕೊಳ್ಳಲು ಶ್ರೀಗಳ ಸಲಹೆ

Published:
Updated:
ಓದುವ ಹವ್ಯಾಸ ಬೆಳೆಸಿಕೊಳ್ಳಲು ಶ್ರೀಗಳ ಸಲಹೆ

ಮುಂಡರಗಿ: `ಓದುಗರು ವಿರಳವಾಗುತ್ತಿರುವ ಇಂದಿನ ದಿನಗಳಲ್ಲಿ ಕಳೆದ ಎರಡು ನೂರು ವರ್ಷಗಳಿಂದ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ 200 ಮಹತ್ವಪೂರ್ಣ ಗ್ರಂಥಗಳನ್ನು ನೀಡಿ, ಕನ್ನಡ ಸಾಹಿತ್ಯವನ್ನು ಶ್ರಿಮಂತಗೊಳಿಸಿದವರು ಜಗದ್ಗುರು ಅನ್ನದಾನೀಶ್ವರರು. ಅವರ ಗ್ರಂಥಮಾಲೆಯನ್ನು ಓದುಗರು, ಅಭಿಮಾನಿಗಳು, ಸಂಘ ಸಂಸ್ಥೆಗಳು ಪೋಷಿಸಬೇಕಾಗ ಅಗತ್ಯವಿದೆ~ ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಏರ್ಪಡಿಸಿದ್ದ ಎಂಟನೇ ಶ್ರಿಗಳ ಸ್ಮರಣೋತ್ಸವ, ಅಯ್ಯಾಚಾರ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.`ವಿವಿಧ ಮನೋರಂಜನೆಗಳ ಭರಾಟೆಯಲ್ಲಿ ಮೌಲಿಕ ಗ್ರಂಥಗಳನ್ನು ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಜನರು ಉತ್ತಮ ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.`ಜಾತ್ರೆ ಉತ್ಸವಗಳು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಆಚರಿಸುವಂತಾಗಬೇಕು. ಜಾತಿ ಮತಗಳ ಸಂಕುಚಿತ ಮನೋಭಾವವನ್ನು ಕಿತ್ತೊಗೆದು ಎಲ್ಲರೂ ಒಂದಾಗಿ ಬಾಳಬೇಕು~ ಎಂದು ಅವರು ತಿಳಿಸಿದರು.

`ನೂತನ ವಧು ವರರು ಮದುವೆಯ ನಂತರ ಕೇವಲ ತಮ್ಮ ಕೌಟುಂಬಿಕ ಜೀವನಕ್ಕೆ ಜೋತು ಬೀಳದೆ ಕೌಟುಂಬಿಕ ಜೀವನದಲ್ಲಿ ಬಿಡುವು ಮಾಡಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ, ಕನಕಗಿರಿಯ ಡಾ.ಚನ್ನಮಲ್ಲ ಸ್ವಾಮೀಜಿ, ನೀಲಗುಂದದ ಚನ್ನಬಸವ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ದುಂಡಸಿಯ ಕುಮಾರ  ಸ್ವಾಮೀಜಿ, ಯರನಾಳದ ಗುರುಬಸವ ಸ್ವಾಮೀಜಿ, ಕುಷ್ಟಗಿಯ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಪ್ರಭುಲಿಂಗ ದೇವರು, ಶಾಸಕ ರಾಮಣ್ಣ ಲಮಾಣಿ,  ಕೆ.ವಿ.ಹಂಚಿನಾಳ, ಬಿ.ಎಸ್.ಹಿರೇಗೌಡರ, ಡಾ.ವೈ.ಎಸ್.ಮೇಟಿ, ಪಾರಸಮಲ್ ಜೈನ್, ರಾಮಣ್ಣ ಬೀಡನಾಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅದಕ್ಕೂ ಪೂರ್ವದಲ್ಲಿ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ದೀಕ್ಷೆ ನೀಡಲಾಯಿತು. ಹಲವಾರು ಗಣ್ಯರಿಗೆ ಸನ್ಮಾ ನ ಮಾಡಲಾಯಿತು. ಜಗದ್ಗುರು ಅನ್ನದಾನೀಶ್ವರ ಅಕ್ಕನಬಳಗದ ಕಾರ್ಯಕರ್ತೆಯರು ಮಂತ್ರಘೋಷ ಮಾಡಿದರು. ಡಾ.ಎಂ.ಬಿ.ಬೆಳವಟಗಿಮಠ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry