ಮಂಗಳವಾರ, ಮೇ 24, 2022
28 °C

ಓರಾ ಓಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಂಡೆಂಟ್‌ಗಳಿಗೆ ಸಮಕಾಲೀನ ಆಧ್ಯಾತ್ಮಿಕ ಲುಕ್ ನೀಡಿದ ಓರಾ ಈಗ ಸ್ವಯಂಭು ನವ-ಓಂಕಾರ್ ಸಂಗ್ರಹಗಳನ್ನು ಹೊರತಂದಿದೆ.ಬುದ್ಧಿ ಚಂಚಲತೆ ದೂರ ಮಾಡುವ ಪವಿತ್ರ ಓಂ ಚಿಹ್ನೆ ಮತ್ತು  ವಿಷ್ಣು, ಶಿವ, ದೇವಿ, ಸೂರ್ಯ, ಗಣೇಶ ಎಂಬ ಪಂಚ ದೈವಗಳಿಂದ ಸ್ಫೂರ್ತಿ ಪಡೆದ ಪದಕಗಳಲ್ಲಿ ಮಾಣಿಕ್ಯ, ಪಚ್ಚೆ, ಮುತ್ತು, ಹವಳ ಸೇರಿ ನವರತ್ನಗಳನ್ನು ಅಳವಡಿಸಲಾಗಿದೆ.ರುದ್ರಾಕ್ಷ, ಟೈಗರ್‌ಸ್ಟೋನ್‌ಗಳೂ ಇವೆ. ಇವು 9 ಪವಿತ್ರ ಗ್ರಹಗಳನ್ನು ಪ್ರತಿನಿಧಿಸುತ್ತವೆ. 22 ಕ್ಯಾರೆಟ್ ಚಿನ್ನ ಮತ್ತು ಶುದ್ಧ ಪ್ಲಾಟಿನಂದಿಂದ ತಯಾರಿಸಲಾಗಿವೆ.ಇದು ನಮ್ಮ ಆಧ್ಯಾತ್ಮಿಕ ಸಂಗ್ರಹಗಳಲ್ಲಿ 14ನೇಯದ್ದು. ಸಾಕಷ್ಟು ಅಧ್ಯಯನ ನಡೆಸಿ ಎಲ್ಲಾ ವಯಸ್ಸಿನವರಿಗೂ ಹೊಂದುವಂತೆ ತಯಾರಿಸಿದ್ದು ಧರಿಸಿದವರಿಗೆ ಶಾಂತಿ, ಆರೋಗ್ಯ, ನೆಮ್ಮದಿ ನೀಡುತ್ತದೆ ಎಂದು ಓರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಜೈನ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.