ಓಲ್ಡ್ ಟ್ರಾಫೋರ್ಡ್‌ಗೆ ನಮ್ಮೂರ್ ಹುಡುಗ

7

ಓಲ್ಡ್ ಟ್ರಾಫೋರ್ಡ್‌ಗೆ ನಮ್ಮೂರ್ ಹುಡುಗ

Published:
Updated:
ಓಲ್ಡ್ ಟ್ರಾಫೋರ್ಡ್‌ಗೆ ನಮ್ಮೂರ್ ಹುಡುಗ

ಮ್ಯಾಂಚೆಸ್ಟರ್ ಯುನೈಟೆಡ್ ಆಯೋಜಿಸಿದ್ದ `ವಾಚ್ ಸೀಸನ್ಸ್ ಲಾಸ್ಟ್ ಹೋಮ್ ಗೇಮ್ ಅಟ್ ಓಲ್ಡ್ ಟ್ರಾಫೋರ್ಡ್~ ಸ್ಪರ್ಧೆಯ ವಿಜೇತರನ್ನು ಪ್ರಕಟಿಸಿದೆ. 12 ವರ್ಷದ ಬಾಲಕ ರೋಷನ್ ಸಿಯೊ ಈ ಅದೃಷ್ಟಶಾಲಿ. ಈತ ಬೆಂಗಳೂರಿಗ ಎಂಬುದು ಇನ್ನು ಹೆಚ್ಚಿನ ಖುಷಿಯ ಸಂಗತಿ. `ಓಲ್ಡ್ ಟ್ರಾಫೋರ್ಡ್~ನಲ್ಲಿ ಮೇ 6ರಂದು ನಡೆಯಲಿರುವ ಮ್ಯೋಂಚೆಸ್ಟರ್ ಯುನೈಟೆಡ್ ಹಾಗೂ ಸ್ವಾನೆಸಿಯಾ ನಡುವಣ ಫುಟ್‌ಬಾಲ್ ಪಂದ್ಯ ವೀಕ್ಷಿಸುವ ಅವಕಾಶವನ್ನು ರೋಷನ್ ತನ್ನದಾಗಿಸಿಕೊಂಡಿದ್ದಾನೆ.

ಮ್ಯೋಂಚೆಸ್ಟರ್ ಯುನೈಟೆಡ್ ಕ್ಲೋಥಿಂಗ್ ಮತ್ತು ಇತರೆ ಘಟಕ `ವಾಚ್ ಸೀಸನ್ಸ್ ಲಾಸ್ಟ್ ಹೋಮ್ ಗೇಮ್ ಅಟ್ ಓಲ್ಡ್ ಟ್ರಾಫೋರ್ಡ್~ ಸ್ಪರ್ಧೆ ಆಯೋಜಿಸಿತ್ತು. ಆಯ್ದ ಸೆಂಟ್ರಲ್, ಪ್ಯಾಂಟಲೂನ್ ಮಳಿಗೆ ಹಾಗೂ ಬ್ರ್ಯಾಂಡ್ ಎಕ್ಸ್‌ಕ್ಲುಸೀವ್ ಸ್ಟೋರ್‌ಗಳಲ್ಲಿ ಸ್ಪರ್ಧೆ ನಡೆದಿತ್ತು. ಬಟ್ಟೆ ಖರೀದಿಸಿದ ಯಾವುದೇ ಗ್ರಾಹಕ ಸ್ಪರ್ಧೆಯ ಅರ್ಜಿ ತುಂಬಬೇಕು. ಮ್ಯಾಂಚೆಸ್ಟರ್ ಜ್ಞಾನ ಕುರಿತು 3 ಪ್ರಶ್ನೆಗಳನ್ನು ಕೇಳಲಾಗಿತ್ತು. 800 ಸ್ಪರ್ಧಿಗಳು ಭಾಗವಹಿಸಿದ್ದು. ಇಬ್ಬರು ಅದೃಷ್ಟಶಾಲಿ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಯಿತು.

`ಸ್ಪರ್ಧೆಯಲ್ಲಿ ವಿಜೇತನಾಗಿರುವುದು ಅತ್ಯಂತ ಸಂತಸ ತಂದಿದೆ. ಮೊದಲ ಸಲ ಫುಟ್‌ಬಾಲ್ ಪಂದ್ಯದ ನೇರ ವೀಕ್ಷಣೆ ಅವಕಾಶ ಲಭಿಸಿದೆ. ಮ್ಯೋಂಚೆಸ್ಟರ್ ಯುನೈಟೆಡ್ ಒಂದು ಉತ್ತಮ ತಂಡ. ಬ್ರಾಕ್ಲಸ್ ಪ್ರೀಮಿಯರ್ ಲೀಗ್‌ನ ಅತ್ಯುತ್ತಮ ತಂಡ~ ಎಂದು ತನ್ನ ಖುಷಿಯನ್ನು ಹಂಚಿಕೊಂಡ ರೋಷನ್ ಸಿಯೊ.

`ನಗರದಲ್ಲಿ ನಡೆದ ಸ್ಪರ್ಧೆಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂಬುದು ಇದರಿಂದ ಸಾಬೀತುಗೊಂಡಿದೆ~ ಎನ್ನುತ್ತಾರೆ ಮ್ಯೋಂಚೆಸ್ಟರ್ ಬ್ರ್ಯಾಂಡ್ ಮ್ಯೋನೇಜರ್ ಜಗದೀಪ್ ಹಾಕಿನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry