ಓವೈಸಿ ಸ್ವಾಗತಕ್ಕೆ ವಿರೋಧ ಹುಮನಾಬಾದ್‌ ಬಂದ್‌

7
ಪ್ರಜಾವಾಣಿ ವಾರ್ತೆ

ಓವೈಸಿ ಸ್ವಾಗತಕ್ಕೆ ವಿರೋಧ ಹುಮನಾಬಾದ್‌ ಬಂದ್‌

Published:
Updated:

ಹುಮನಾಬಾದ್: ಆಂಧ್ರಪ್ರದೇಶದ ಎಂಐಎಂ ಪಕ್ಷದ ಶಾಸಕ ಅಕ್ಬರುದ್ದೀನ್‌ ಓವೈಸಿ ಸೋಮವಾರ ರಾತ್ರಿ ಇಲ್ಲಿಗೆ ಬಂದಿದ್ದನ್ನು ಖಂಡಿಸಿ ಮಂಗಳವಾರ ನಾಗರಿಕ ಸಮಿತಿ ನೇತೃತ್ವದಲ್ಲಿ ಹುಮನಾಬಾದ್‌ ಬಂದ್‌ ಆಚರಿಸಲಾಯಿತು.ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಪಟ್ಟಣದ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಶಾಲಾ–ಕಾಲೇಜುಗಳು ಸ್ವಯಂ ಪ್ರೇರಣೆಯಿಂದ ರಜೆ ಘೋಷಿಸಿದ್ದವು. ಓವೈಸಿಯನ್ನು ಸ್ವಾಗತಿಸಿದ ಯುವಕರನ್ನು ಬಂಧಿಸಬೇಕು ಎಂದು ಶಾಸಕ ರಾಜಶೇಖರ ಬಿ. ಪಾಟೀಲ ಮತ್ತಿತರರು ಆಗ್ರಹಿಸಿದರು.ಓವೈಸಿ ಗುಲ್ಬರ್ಗದ ಖ್ವಾಜಾ ಬಂದೇ ನವಾಜ್‌ ಉರುಸ್‌ ಮುಗಿಸಿ ಹೈದರಾಬಾದ್‌ಗೆ ತೆರಳುವ ಮಾರ್ಗಮಧ್ಯ ಸೋಮವಾರ ರಾತ್ರಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ದಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವಿಷಯ ತಿಳಿದ ಕೆಲ ಯುವಕರು  ಘೋಷಣೆ ಕೂಗುತ್ತ ಅವರನ್ನು ಬೈಕ್‌ ಮೆರವಣಿಗೆಯಲ್ಲಿ ಪಟ್ಟಣಕ್ಕೆ ಕರೆತಂದರು. ಈ ವಿಷಯ ನಾಗರಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry