ಔರಾದ್‌ನಲ್ಲಿ ವಾಜಪೇಯಿ ಜನ್ಮದಿನ

7

ಔರಾದ್‌ನಲ್ಲಿ ವಾಜಪೇಯಿ ಜನ್ಮದಿನ

Published:
Updated:

ಔರಾದ್: ಇಲ್ಲಿಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವ್ಹಾಣ್, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಆದರ್ಶ ರಾಜಕಾರಣಿಗಳಲ್ಲಿ ಹೆಸರು ಮಾಡಿದವರು. ಅವರ ಪ್ರಾಮಾಣಿಕತೆ, ದೇಶ ಸೇವೆ, ನಿಷ್ಕಳಂಕ ಅಡಳಿತ ವಿರೋಧಿಗಳು ಮೆಚ್ಚುವಂತಹದ್ದಾಗಿದೆ. ಆವರ ಆದರ್ಶ ಇಂದಿನ ಯುವ ರಾಜಕಾರಣಿಗಳಿಗೆ ಅಗತ್ಯ ಎಂದು ಹೇಳಿದರು.ವಾಜಪೇಯಿ ಅವರಂತಹವರು ಬಿಜೆಪಿಯಲ್ಲಿ ಇದ್ದ ಕಾರಣ ಇಂದು ದೊಡ್ಡ ಪಕ್ಷವಾಗಿದೆ. ಕಷ್ಟಪಟ್ಟು ಬೆಳೆಸಿದ ಪಕ್ಷ ಉಳಿಸಿ ಬೆಳೆಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಶ ಭೋಸ್ಲೆ, ಜಯಕುಮಾರ ಕಾಂಗೆ ಇತರರು ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ಎಪಿಎಂಸಿ ಅಧ್ಯಕ್ಷ ವೆಂಕಟರಾವ ಡೊಂಬಾಳೆ, ಅಮೃತರಾವ ವಟಗೆ, ಶಿವಾಜಿರಾವ ಕಾಳೆ, ಶರಣಪ್ಪ ಪಂಚಾಕ್ಷಿರೆ, ಬಂಡೆಪ್ಪ ಕಂಟೆ, ಸಚಿನ್ ರಾಠೋಡ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry