ಮಂಗಳವಾರ, ಜೂನ್ 22, 2021
22 °C

ಔಷಧೀಯ ಸಸ್ಯ ಅಧ್ಯಯನ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ನಮ್ಮ ರಾಜ್ಯದಲ್ಲಿ ಪಶ್ಚಿಮಘಟ್ಟದಲ್ಲಿ ಔಷಧೀಯ ಸಸ್ಯಗಳು ಹೇರಳವಾಗಿವೆ. ಅವುಗಳ ಬಗ್ಗೆ ಸಮಗ್ರ ಅಧ್ಯಯನ ನಡೆದು ಜನಸಾಮಾನ್ಯರಿಗೆ ಕೂಡ ಮಾಹಿತಿ ತಿಳಿಯಬೇಕಾಗಿದೆ~ ಎಂದು ಕುದುರೆಮುಖ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನೆಟಾಲ್ಕರ್ ಇಲ್ಲಿ ಹೇಳಿದರು.ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು ಹಾಗೂ ಅರಣ್ಯ ಇಲಾಖೆಯ ಕುದುರೆ ಮುಖ ಅರಣ್ಯವಿಭಾಗದ ಸಹಯೋಗದಲ್ಲಿ ಗುರುವಾರ ಎಂಜಿಎಂನಲ್ಲಿ ಆಯೋಜಿಸಿದ್ದ ಔಷಧೀಯ ಸಸ್ಯಗಳ ಕುರಿತ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಸ್ಥಳೀಯರು ಅನಾದಿ ಕಾಲದಿಂದಲೂ ತಮ್ಮ ಸುತ್ತಮುತ್ತಲ ಗ್ರಾಮದಲ್ಲಿ ಸಿಗುವ ಔಷಧೀಯ ಸಸ್ಯಗಳನ್ನು ಬಳಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಂಪರೆ ಕಡಿಮೆಯಾಗಿವೆ. ಹೀಗಾಗಿ ಇಂತಹ ಅಮೂಲ ಗಿಡಮೂಲಿಕೆ, ಸಸ್ಯಸಂಪತ್ತಿನ ಬಗ್ಗೆ ಮತ್ತೆ ಪರಿಚಯ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಧ್ಯಯನ ಅಗತ್ಯ~ ಎಂದರು.`ಜಿಲ್ಲೆಯ ಕೊಲ್ಲೂರು ಕೆರೆ ಕಟ್ಟೆ ಪ್ರದೇಶಗಳನ್ನು ಔಷಧೀಯ ಸಸ್ಯಗಳ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಸ್ಥಳೀಯರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊಲ್ಲೂರು ಪ್ರದೇಶದ ಔಷಧೀಯ ಸಸ್ಯಗಳ ಬಗ್ಗೆ ತರಬೇತಿ ನೀಡಬೇಕಾದ ಅಗತ್ಯವೂ ಇದೆ~ ಎಂದರು. `ಔಷಧೀಯ ಸಸ್ಯಗಳು ಮತ್ತು ಅವುಗಳ ಸಂರಕ್ಷಣೆ~ ಬಗ್ಗೆ ಪಡುಬಿದಿಯ ಎನ್.ಟಿ.ಅಂಚನ್ ಮಾತನಾಡಿದರು.

ಕೊಲ್ಲೂರಿನ ಆರ್‌ಎಫ್‌ಓ ಆಸ್ಟಿನ್, ಅರಣ್ಯಾಧಿಕಾರಿ ಸತೀಶ್ ಬಾಬಾ ರೈ, ಸಂಯೋಜಕಿ ಸಪ್ನಾ, ಕಾಲೇಜಿನ ಪ್ರಾಂಶುಪಾಲ ಡಾ.ಪಿ.ವಿ.ಗೌಡ ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.