ಔಷಧ ಕಳ್ಳಸಾಗಣೆ ನಿಯಂತ್ರಣ: ಉನ್ನತ ಮಟ್ಟದ ಸಮಿತಿ ರಚನೆ

7

ಔಷಧ ಕಳ್ಳಸಾಗಣೆ ನಿಯಂತ್ರಣ: ಉನ್ನತ ಮಟ್ಟದ ಸಮಿತಿ ರಚನೆ

Published:
Updated:

ನವದೆಹಲಿ (ಪಿಟಿಐ): ಆನ್‌ಲೈನ್ ಮೂಲಕ ನಿಷೇಧಿತ ಔಷಧ  ಮಾರಾಟವಾಗುವುದನ್ನು ನಿಯಂತ್ರಿಸುವ ಸಂಬಂಧ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ.ಈ ಸಮಿತಿ ಔಷಧ ಕಳ್ಳಸಾಗಣೆ ನಿಯಂತ್ರಿಸುವ ಜೊತೆಗೆ ಹೊಸ ಔಷಧ ನೀತಿ ರೂಪಿಸುವ ತಂಡದ ಭಾಗವಾಗಿ ಕೆಲಸ ಮಾಡಲಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ತಿಳಿಸಿದ್ದಾರೆ. ರಹಸ್ಯ ವ್ಯಾಪಾರ, ಕಪ್ಪು ಹಣ ವಹಿವಾಟು ಮತ್ತು ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿಯೂ ಸಮಿತಿ ನೆರವಾಗಲಿದೆ.ಮಾದಕವಸ್ತು ನಿಯಂತ್ರಣ ದಳ(ಎನ್‌ಸಿಬಿ)ದ ಅಡಿಯಲ್ಲಿ ರಚನೆಯಾಗಿರುವ ಉನ್ನತ ಮಟ್ಟದ ಸಮಿತಿ ಅಂತರ್ಜಾಲದ ಮೂಲಕ ನಡೆಯುವ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು `ಸೈಬರ್ ನಿಗಾ ಘಟಕ~ಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ. ಮಾದಕ ವಸ್ತು ಒಳಗೊಂಡ  ಔಷಧ ಸಾಗಣೆ ಆತಂಕಕ್ಕೆ ಕಾರಣ ವಾಗಿದೆ. ಇದೀಗ ರಚನೆಯಾಗಿರುವ ಉನ್ನತ ಮಟ್ಟದ ಸಮಿತಿ  ದೇಶದ ಒಳಗೆ ಮತ್ತು ಹೊರಗೆ ಔಷಧ ಕಳ್ಳಸಾಗಾಣೆ ನಿಯಂತ್ರಿಸುವ ಶಾಸನಬದ್ಧ ಕಾನೂನು ರಚಿಸುವ ಜೊತೆಗೆ ಸಿಬಿಐ, ಡಿಆರ್‌ಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳ ಜೊತೆಗೆ ಮಾಹಿತಿ ವಿನಿಮಯ ಹಾಗೂ ಸಹಕಾರವನ್ನು ಕೇಳಲಿದೆ.ರಾಷ್ಟ್ರೀಯ ತನಿಖಾ ಸಂಸ್ಥೆಗಳಲ್ಲೊಂದಾದ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಎನ್‌ಡಿಪಿಎಸ್ ಮತ್ತು ಪಿಟಿಐ- ಎನ್‌ಡಿಪಿಎಸ್ ಕಾಯ್ದೆಅಡಿ ಔಷಧ ಕಳ್ಳ ಸಾಗಣೆದಾರರ ವಿರುದ್ಧ ಕ್ರಮ ಕೈಗೊಳ್ಳಲಿದೆ.ಈ ಉನ್ನತ ಮಟ್ಟದ ಸಮಿತಿಗಾಗಿ ಸರ್ಕಾರ ಹಲವು ಮಾರ್ಗ ಸೂಚಿಗಳನ್ನು ತಯಾರಿಸಿದೆ. ಇವು ಜಾಗತಿಕ ಮಾದಕ ವಸ್ತು ನಿಗ್ರಹ ಮಂಡಳಿ, ಅಂತರರಾಷ್ಟ್ರೀಯ ಮಾದಕ ಔಷಧ ನಿಯಂತ್ರಣ ಮಂಡಳಿಯು 2010ರಲ್ಲಿ ನೀಡಿದ ಶಿಫಾರಸುಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry