ಕಂಗನಾಗೆ ಕೈತುಂಬ ಕೆಲಸ

7

ಕಂಗನಾಗೆ ಕೈತುಂಬ ಕೆಲಸ

Published:
Updated:
ಕಂಗನಾಗೆ ಕೈತುಂಬ ಕೆಲಸ

ಕಂಗನಾ ರನೌತ್‌ಗೆ ಈಗ ಕೈತುಂಬ ಕೆಲಸವಿದೆಯಂತೆ. `ಶೂಟ್ ಅಟ್ ವಡಾಲಾ~ ಚಿತ್ರ ಆರಂಭವಾಗಿದೆ. `ತನು ವೆಡ್ಸ್ ಮನು~ ಚಿತ್ರದ ಮುಂದುವರಿದ ಭಾಗ, `ಕ್ರಿಶ್ 3~, `ದೇಡ್ ಇಷ್ಕಿಯಾ~, ಮುಂತಾದ ಚಿತ್ರಗಳಲ್ಲಿ ಕಂಗನಾ ಮಿಂಚಲಿದ್ದಾರೆ.

ಮಧುರ್ ಭಂಡಾರ್ಕರ್ ಅವರ ಫ್ಯಾಶನ್ ನಂತರ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ~ ಚಿತ್ರದಲ್ಲಿಯ ನಟನೆಯಿಂದಲೇ ತಮಗೆ ಇಷ್ಟು ಅವಕಾಶ ದೊರೆಯುವಂತಾಯಿತು ಎನ್ನುತ್ತಾರೆ ಕಂಗನಾ.

`ತನು ವೆಡ್ಸ್ ಮನು~ ಯಶಸ್ಸು ಸಹ ಇದರೊಂದಿಗೆ ಇದೆ. ಎಲ್ಲಿಯೂ ಒಂದೇ ರೀತಿಯ ಪಾತ್ರಗಳನ್ನು ಮಾಡದೇ ಇರುವುದೇ ತಮ್ಮ ವಿಶೇಷ ಎಂದೆಲ್ಲ ಹೇಳಿರುವ ಕಂಗನಾಗೆ ಕರಣ್‌ಜೋಹರ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿಯೂ ಮುಖ್ಯ ಪಾತ್ರ ನಿರ್ವಹಿಸುವ ಅವಕಾಶ ದೊರೆತಿದೆ.

`ಚಿಲ್ಲರ್ ಪಾರ್ಟಿ~ ಚಿತ್ರದ ನಂತರ ವಿಕಾಸ್ ಬೆಹ್ಲ್ ಸಹ ಸುಮ್ಮನೆ ಕುಳಿತಿಲ್ಲ. ಅವರು `ಕ್ವೀನ್~ ಚಿತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ. ಚಿತ್ರಕತೆಯ ಕುರಿತು ಇನ್ನೂ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳುವ ವಿಕಾಸ್ ಮುಖ್ಯ ಪಾತ್ರ ಮಾತ್ರ ಕಂಗನಾಗೇ ನೀಡಿರುವುದಾಗಿ ಹೇಳಿದ್ದಾರೆ.

 ಅಲ್ಲಿಗೆ ಇನ್ನೆರಡು ವರ್ಷಗಳವರೆಗೆ ಕಂಗನಾಗೆ ಕೈತುಂಬ ಕೆಲಸವಿದೆ ಎನ್ನುವುದರಲ್ಲಿ ಸುಳ್ಳೇನೂ ಇಲ್ಲ ಎಂಬಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry