ಕಂಗನಾ ಈಗ ನಿರ್ದೇಶಕಿ

7

ಕಂಗನಾ ಈಗ ನಿರ್ದೇಶಕಿ

Published:
Updated:

ನಟಿ ಕಂಗನಾ ರನೌಟ್ ಈಗ ನಿರ್ದೇಶಕಿಯ ಟೊಪ್ಪಿ ಧರಿಸಲು ಸಜ್ಜಾಗಿದ್ದಾರೆ. ನಟನೆಯ ಅನುಭವವನ್ನು ಮಡಿಲಿಗೆ ಕಟ್ಟಿಕೊಂಡು ಆ್ಯಕ್ಷನ್‌, ಕಟ್‌ ಹೇಳಲು ಹೊರಟಿರುವ ಕಂಗನಾ ಅವರನ್ನು ಈಗ ಎಲ್ಲರೂ ಕಣ್ಣರಳಿಸಿ ನೋಡುತ್ತಿದ್ದಾರೆ. ಕಂಗನಾ ದಿಢೀರ್‌ ಅಂತ ಏನೂ ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ, ಆಕೆಗೆ ನಿರ್ದೇಶನದ ಕನಸು ಮೊದಲಿನಿಂದಲೂ ಇತ್ತಂತೆ.ಈಗಷ್ಟೇ 26 ಪೂರೈಸಿರುವ ನಟಿ ಕಂಗನಾ ರನೌಟ್‌ ರಾಷ್ಟ್ರಪ್ರಶಸ್ತಿ ಪುರಸ್ಕೃತೆ. ಈಕೆ ಈಗ ನಿರ್ದೇಶಿಸುತ್ತಿರುವುದು ಕಮರ್ಷಿಯಲ್‌ ಚಿತ್ರವಲ್ಲ. ಬದಲಾಗಿ ಕಲಾತ್ಮಕ ಚಿತ್ರವೊಂದನ್ನು ನಿರ್ದೇಶಿಸುವ ಉಮೇದಿನಲ್ಲಿದ್ದಾರೆ. ಸ್ವತಃ ಕಂಗನಾ ಅವರೇ ಕಲಾತ್ಮಕ ಚಿತ್ರಕ್ಕೆ ಚಿತ್ರಕಥೆ ಹೆಣೆದಿದ್ದು, ಇವರಿಗೆ ಆಸ್ಟ್ರೇಲಿಯನ್‌ ಬರಹಗಾರರೊಬ್ಬರು ನೆರವು ನೀಡಿದ್ದಾರಂತೆ. ಅವರು ಈ ಚಿತ್ರವನ್ನು ಅಮೆರಿಕದಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ. ನಾಲ್ಕು ವರ್ಷದ ಪುಟ್ಟ ಹುಡುಗ ಮತ್ತು ಒಂದು ನಾಯಿಯ ಸುತ್ತ ಚಿತ್ರಕಥೆ ಹರಡಿಕೊಂಡಿದೆಯಂತೆ.‘ನಾನು ಈ ಕಿರುಚಿತ್ರವನ್ನು ಅಮೆರಿಕದಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದೇನೆ. ಮೊದಲಿನಿಂದಲೂ ಕಲಾತ್ಮಕ ಚಿತ್ರವೊಂದಕ್ಕೆ ಆ್ಯಕ್ಷನ್‌, ಕಟ್‌ ಹೇಳಬೇಕು ಎಂಬುದು ನನ್ನ ಕನಸಾಗಿತ್ತು. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದರಿಂದ  ಈವರೆಗೂ ನನ್ನ ಆಸೆ ಈಡೇರಿರಲಿಲ್ಲ. ಈಗ ಸಮಯ ಕೂಡಿಬಂದಿದೆ. ಎಲ್ಲ ಅಂದುಕೊಂಡಂತೆ ಆದರೆ ಈ ವರ್ಷದೊಳಗೆ ಚಿತ್ರದ ಚಿತ್ರೀಕರಣ ಪೂರೈಸಲಿದ್ದೇನೆ. ಈಗ ನನ್ನ ಕೈಯಲ್ಲಿ ಎರಡು ಚಿತ್ರಗಳಿರುವುದರಿಂದ ಅವೆರಡನ್ನೂ ಪೂರೈಸಿದ ನಂತರ ಈ ಬಗ್ಗೆ ಯೋಚಿಸುತ್ತೇನೆ. ಆದರೆ, ನಾನು ಆ್ಯಕ್ಷನ್‌, ಕಟ್‌ ಹೇಳುವುದಂತೂ ನಿಜ’ ಎಂದಿದ್ದಾರೆ ಕಂಗನಾ.ನಟಿಯೊಬ್ಬಳು ನಿರ್ದೇಶಕಿಯಾಗುತ್ತಿರುವ ಸಂದರ್ಭದಲ್ಲಿ ಆಕೆ ಯಾವ ರೀತಿಯ ಚಿತ್ರನಿರ್ಮಾಣ ಮಾಡುತ್ತಾರೆ ಎಂಬುದರ ಕುರಿತು ಸಹಜವಾಗಿ ಎಲ್ಲರಲ್ಲೂ ಕುತೂಹಲ ಇರುತ್ತದೆ. ಈ ಬಗ್ಗೆ ಅವರನ್ನು ಕೇಳಿದರೆ ಹೇಳುವುದು ಹೀಗೆ: ‘ನಾನು ನಿರ್ದೇಶಿಸಲಿರುವ ಕಲಾತ್ಮಕ ಚಿತ್ರ ಖ್ಯಾತನಾಮರೊಬ್ಬರ ಜೀವನಕಥೆಯನ್ನು ಆಧರಿಸಿದ್ದು. ಆದರೆ, ಆ ವ್ಯಕ್ತಿ ಯಾರು ಎಂಬುದನ್ನು ಈಗಲೇ ನಾನು ಈಗಲೇ ಹೇಳಲು ಇಚ್ಛಿಸುವುದಿಲ್ಲ’.ನಟಿಯರೆಲ್ಲಾ ನಿರ್ಮಾಪಕಿಯರಾಗುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಈ ಬಗ್ಗೆ ಕಂಗನಾ ಅವರನ್ನು ಕೇಳಿದರೆ, ‘ಇಲ್ಲ. ಚಿತ್ರ ನಿರ್ಮಾಣ ಮಾಡುವುದು ನನಗಿಷ್ಟವಿಲ್ಲ. ಅದು ನನ್ನ ಆಸಕ್ತಿಯ ವಿಷಯವೂ ಅಲ್ಲ’ ಎಂದು ಕಡ್ಡಿಮುರಿದಂತೆ ಹೇಳುತ್ತಾರೆ. ಅಂದಹಾಗೆ, ರಾಕೇಶ್‌ ರೋಷನ್‌ ನಿರ್ದೇಶನದ

‘ಕ್ರಿಶ್‌ 3’ ಚಿತ್ರದಲ್ಲಿ ಕಂಗನಾ ನಟಿಸಿದ್ದು, ತೆರೆಗೆ ಬರಲು ಸಿದ್ಧವಿದೆ. ಇದರ ಜತೆಗೆ ‘ಅಂಗ್ಲಿ’, ‘ಕ್ವೀನ್‌’, ‘ರಜ್ಜೋ’ ಮತ್ತು ‘ರಿವಾಲ್ವರ್‌ ರಾಣಿ’ ಚಿತ್ರಗಳು ಕಂಗನಾ ಮಡಿಲಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry