ಗುರುವಾರ , ಮೇ 6, 2021
23 °C

ಕಂಚನಹಳ್ಳಿ: ಮುಂದುವರಿದ ಕಾರ್ಮಿಕರ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಕಂಚನಹಳ್ಳಿಯ ಹರಿಯಾಣ ಸ್ಟೀಲ್ಸ್ ಕಂಪೆನಿ ಮತ್ತು ಪವರ್ಸ್‌ನ ಕಾರ್ಮಿಕರು ಆರಂಭಿಸಿರುವ ಮುಷ್ಕರ ಸೋಮವಾರವೂ ಮುಂದುವರಿದಿದೆ.ಸಿಬ್ಬಂದಿ ಸಿಐಟಿಯು ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಮುಷ್ಕರ ಆರು ದಿನ ಪೂರೈಸಿದಂತಾಗಿದೆ.ಸೋಮವಾರ ಮುಷ್ಕರದ ಸ್ಥಳಕ್ಕೆ ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು ಭೇಟಿನೀಡಿ ಕಾರ್ಮಿಕರೊಡನೆ ಮಾತುಕತೆ ನಡೆಸಿದರು. ಪಕ್ಷದ ಉಪಾಧ್ಯಕ್ಷ ಬಿ.ಎಚ್. ನಾರಾಯಣ್‌ಗೌಡ ಉಪಸ್ಥಿತರಿದ್ದರು.`ಸಂಸ್ಥೆಯವರು ಈಚೆಗೆ ಸಿಬ್ಬಂದಿ ರಮೇಶ ಎಂಬುವವರನ್ನು ಸೇವೆಯಿಂದ ವಜಾಗೊಳಿಸಿದ್ದು ಅವರನ್ನು ಪುನಃ ನೇಮಕ ಮಾಡಿಕೊಳ್ಳಬೇಕು, ಪ್ರತಿದಿನ ಎಂಟು ಗಂಟೆ ಕಾಲ ದುಡಿಯುತ್ತಿರುವ 12ಮಂದಿ ಸಿಬ್ಬಂದಿಯ ವೇತನವನ್ನು ಕಡಿತ ಮಾಡಲಾಗಿದ್ದು, ಅವರಿಗೆ ಹಿಂದಿನಂತೆಯೇ ವೇತನ ನೀಡಬೇಕು, ಸಂಸ್ಥೆ ಈ ವರೆಗೆ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿಲ್ಲ, ಕೂಡಲೇ ಆ ಕಾರ್ಯವನ್ನು ಮಾಡಬೇಕು, ಕಾರ್ಮಿಕರಿಗೆ ಬ್ಯಾಂಕ್ ಖಾತೆ ಮೂಲಕವೇ ವೇತನ ನೀಡ ಬೇಕು, ಏಳು ವರ್ಷಗಳಿಂದ ಬೋನಸ್ ನೀಡಿಲ್ಲ... ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಪ್ರತಿಭಟನಾಕಾರರು ಶಿವರಾಮು ಅವರಿಗೆ ಮಾಹಿತಿ ನೀಡಿದರು.ಸಂಸ್ಥೆಯ ಅಧಿಕಾರಿಗಳನ್ನು ಹಾಗೂ ಕಾರ್ಮಿಕ ಸಚಿವರನ್ನು ಶೀಘ್ರದಲ್ಲೇ ಭೇಟಿಮಾಡಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಶಿವರಾಮು ಪ್ರತಿಭಟನಾನಿರತರಿಗೆ ಭರವಸೆ ನೀಡಿದರು.ಕಾಂಗ್ರೆಸ್ ಮುಖಂಡರಾದ ವೆಂಕಟೇಗೌಡ, ಬಿ.ಕೆ. ಜಗದೀಶ್, ಸಿ.ಎನ್. ಮಹಾಲಿಂಗ, ಬಿ.ಡಿ. ಕೃಷ್ಣ ಕುಮಾರ್ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.