ಕಂಚಿನ ಯುಗದಲ್ಲೂ ಸಾಮಾಜಿಕ ಜಾಲತಾಣ!

7

ಕಂಚಿನ ಯುಗದಲ್ಲೂ ಸಾಮಾಜಿಕ ಜಾಲತಾಣ!

Published:
Updated:

ಲಂಡನ್ (ಪಿಟಿಐ): ಕಂಚಿನ ಯುಗದ್ಲ್ಲಲೂ ಫೇಸ್‌ಬುಕ್ ಮಾದರಿಯ ಸಂವಹನ ವಿಧಾನ ಇತ್ತು ಎನ್ನುತ್ತಾರೆ ವಿಜ್ಞಾನಿಗಳು!ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವರು ಪರಸ್ಪರ ಸಂವಹನಕ್ಕಾಗಿ ಕಲ್ಲುಗಳ ಮೇಲೆ ಬಿಡಿಸಿದ ಸಾಂಕೇತಿಕ ಚಿತ್ರಗಳನ್ನು `ಇತಿಹಾಸ ಪೂರ್ವ~ದ ಫೇಸ್ ಬುಕ್ ಮಾದರಿ ಎಂದು ಕೇಂಬ್ರಿಡ್ಜ್ ವಿಜ್ಞಾನಿಗಳು ಬಣ್ಣಿಸುತ್ತಾರೆ. ರಷ್ಯ ಮತ್ತು ಸ್ವೀಡನ್‌ನ ಗುಹೆ ಹಾಗೂ ಸರೋವರಗಳ ಬಳಿ ಕಂಚಿನಯುಗದ ಜನರು ಕೆತ್ತಿದ ಸಾವಿರಾರು ಸಾಂಕೇತಿಕ ಚಿತ್ರಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ.

 

`ಭಾಷೆ ಉಗಮಕ್ಕಿಂತಲೂ ಪೂರ್ವದಲ್ಲಿ ಸಂಜ್ಞೆ, ಸಾಂಕೇತಿಕ ಚಿತ್ರಗಳ ಮೂಲಕ ಆದಿ ಮಾನವವರು ತಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದರು~ ಎಂದು ಸಂಶೋಧಕ  ಮಾರ್ಕ್ ಸ್ಯಾಪ್‌ವೆಲ್  ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry