ಕಂಡೆ ನಾ ನನ್ನವ್ಗ...

7

ಕಂಡೆ ನಾ ನನ್ನವ್ಗ...

Published:
Updated:

ಕೊಟ್‌ಗ್ಯಾಗ ಆಕಳ್ಗ ಮೈಲಾಕ ಬಿಟ್ಟು

ಊರೆಲ್ಲಾ ಹರಡ್ಯಾನ ಸಾರಾಯಿ ಕುಡಿದು

ಗೂಟಕ್ಕ ಕಟ್ಟಿ ನನ್ನವ್ಗ ಹೊಡೆದು

ಮೈ ಹಣ್ಣ ಮಾಡ್ಯಾನ ಮಹಾರಾಯ

ಆಗ ಆ ಆಕಳಾಗ ಕಂಡೆ ನಾ ನನ್ನವ್ಗ.

ಎರಡ ಅಕ್ಷರ ಕಲಿಸಾಕ

ಎರಡ ಹೊತ್ತು ತಿನಿಸಾಕ

ಬಲು ಕಷ್ಟ ಪಟ್ಟಾಳ ನನ್ನವ್ವ

ಬರಗಾಲ ತಗೊಂಡು ತಿರುಗ್ಯಾಳ ಬೀದಿಗೊಂಟ

ಚುಚ್ಯಾವ ಮುಳ್ಳು ಹಾದಿಗೊಂಟ

ಆಗ ಆ ಮುಳ್ಳಿನೊಳಗ ಕಂಡೆ ನಾ ನನ್ನವ್ಗ.

ಹುಟ್ಟಿ ಬಂದಾಳೊ ನನ್ನವ್ವ ನನ್ನ ಹೊಟ್ಯಾಗ

ಮರುಜನ್ಮ ಪಡೆದಳು ಎಳೆ ಕೂಸಿನೊಳಗ

ಹುಟ್ಟಿತ್ತು ನನ್ನ ಕೂಸ ಅಳಕೋತ

ಆಗ ಆ ಕಣ್ಣೀರಿನೊಳಗ ಕಂಡೆ ನಾ ನನ್ನವ್ಗ.

ನೆನಪೈತೆ ನನಗ ಆ ತಾಯಿಯ ಕರಳು

ಕೆಟ್ಟರು ತನಗೆ ಸತ್ತರು ತನಗೆ

ನಾನು ನಂದು ಎಂದು ತಿಳಿವೆ

ಎಲ್ಲರೂ ನನ್ನವರು ಎಂದಳು

ಆಗ ಆ ದೇವರಲ್ಲಿ ಕಂಡೆ ನಾ ನನ್ನವ್ಗ.

ಮಲಗೋ ಕೂಸಿಗ

ಮುದ್ದು ಮಾಡ್ಯಾಳ ಮಮತೆ ತೋರ‌್ಯಾಳ

ಮಲಗು ಕಂದ ಅಂತ ಲಾಲಿ ಹಾಡ್ಯಾಳ

ಬಡಿಯುತ್ತ ಕಣ್ಣು ತೊಟ್ಟೀಲ ತೂಗ್ಯಾಳ

ಆಗ ಆ ಕಣ್ಣಿನ ರೆಪ್ಪಿಯೊಳಗ ಕಂಡೆ ನಾ ನನ್ನವ್ಗ.

ಝರಿ ನೀರೀಗಿ ಕೊನಿ ಐತಿ

ಹುಟ್ಟು ಸಾವು ಖರೆ ಐತಿ

ಕೊನೆ ಐತಿ ಮಳೆರಾಯ ನಿನ್ನ ಮಳೆ ಹನಿಗಿ

ಆದರೆ ಸದಾ ಕಾಣ್‌ತೀನಿ ತುಂಬಿದ ಪ್ರೀತಿ

ನನ್ನವ್ವ ನಿನ್ನೊಳಗ... ನನ್ನವ್ವ ನಿನ್ನೊಳಗ...ಚಿತ್ರಗಳು: ಶಿಲ್ಪಾ ಎಸ್. ಕಬ್ಬಿಣಕಂತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry