ಕಂದಕಕ್ಕೆ ಉರುಳಿದ ಬಸ್; 21 ಸಾವು

7

ಕಂದಕಕ್ಕೆ ಉರುಳಿದ ಬಸ್; 21 ಸಾವು

Published:
Updated:
ಕಂದಕಕ್ಕೆ ಉರುಳಿದ ಬಸ್; 21 ಸಾವು

ಶಿಮ್ಲಾ (ಐಎಎನ್‌ಎಸ್):ಮಿನಿ ಬಸ್ಸೊಂದು 500 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 21 ಜನರು ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಸಿರಿಮೂರಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.ಖಾಸಗಿ ಮಿನಿ ಬಸ್ ಉಚಟಕ್ಕರ್‌ನಿಂದ ಪ್ರಸಿದ್ಧ ರೇಣುಕಾಜೀ ದೇವಾಲಯಕ್ಕೆ ತೆರಳುತ್ತಿತ್ತು ಎಂದು ಹಿಮಾಚಲ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 21 ಜನರು ಮೃತಪಟ್ಟಿದ್ದಾರೆ. ಇವರೆಲ್ಲಾ ಒಂದೇ ಕುಟುಂಬದ ಸಂಬಂಧಿಗಳು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ 19 ಜನರು ಸಾವನ್ನಪ್ಪಿದ್ದರೆ ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಚಾಲಕನ ನಿಯಂತ್ರಣ ತಪ್ಪಿದ ಬಸ್ 500 ಅಡಿಯ ಕಂದಕಕ್ಕೆ ಹತ್ತಾರು ಸುತ್ತು ಉರುಳಿದ್ದರಿಂದ ಯಾರು ಸಹ ಬದುಕುಳಿಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry