ಕಂದಕಕ್ಕೆ ಟ್ರಕ್: 17 ಮಂದಿ ಭಕ್ತರ ಸಾವು

7

ಕಂದಕಕ್ಕೆ ಟ್ರಕ್: 17 ಮಂದಿ ಭಕ್ತರ ಸಾವು

Published:
Updated:

ಕೊರಾಪುತ್/ಒರಿಸ್ಸಾ (ಪಿಟಿಐ):  ದಸರಾ ಉತ್ಸವವನ್ನು ಆಚರಿಸಿ ಹಿಂತಿರುಗುತ್ತಿದ ವೇಳೆ ಟ್ರಕ್ ಕಂದಕಕ್ಕೆ ಉರುಳಿದ ಪರಿಣಾಮ 17 ಮಂದಿ ಭಕ್ತರು ಮೃತಪಟ್ಟು,14 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ದಾಸಾಮಂತಾಪುರ ಎಂಬಲ್ಲಿ ಶುಕ್ರವಾರ ನಡೆದಿದೆ.ಘಟನೆಯ ವಿವರ: ದಾಸಾಮಂತಾಪುರದಲ್ಲಿ ನಡೆದ ದಸರಾ ಜಾತ್ರೆಯಿಂದ ತಮ್ಮ ಊರಿಗೆ ಮರುಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಎಸ್‌ಪಿ ಅನುಪ್ ಸಾಹು ತಿಳಿಸಿದ್ದಾರೆ.ಈ ಘಟನೆಯಲ್ಲಿ ಏಳು ಮಹಿಳೆಯರು ಸೇರಿದಂತೆ ಸ್ಥಳದಲ್ಲಿ 14 ಮಂದಿ ಸತ್ತರೆ, ತೀವ್ರವಾಗಿ ಗಾಯಗೊಂಡಿದ್ದ ಇತರ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದರು.ಅಪಘಾತದಲ್ಲಿ ಮೃತಪಟ್ಟವರು ದಾಸಾಮಂತಾಪುರ ಠಾಣಾ ವ್ಯಾಪ್ತಿಯ ಬೇಧಾಪಾದರ್, ಮಂಗಳಗುಡ ಮತ್ತು ಸೆಂಬಿತೊತಗುಡ ಪ್ರದೇಶಕ್ಕೆ ಸೇರಿದವರು ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry