ಕಂದಕಕ್ಕೆ ಟ್ರಕ್: 18 ಮಂದಿ ಸಾವು

7

ಕಂದಕಕ್ಕೆ ಟ್ರಕ್: 18 ಮಂದಿ ಸಾವು

Published:
Updated:

ಕೊರಾಪುತ್/ಒರಿಸ್ಸಾ (ಪಿಟಿಐ): ದಸರಾ ಉತ್ಸವವನ್ನು ಆಚರಿಸಿ ಹಿಂತಿರುಗುತ್ತಿದ ವೇಳೆ ಟ್ರಕ್ ಕಂದಕಕ್ಕೆ ಉರುಳಿದ ಪರಿಣಾಮ 18 ಮಂದಿ ಮೃತಪಟ್ಟು,14 ಮಂದಿ ಗಾಯಗೊಂಡಿರುವ ಘಟನೆ ಒರಿಸ್ಸಾದ ದಾಸಾಮಂತಾಪುರ ಎಂಬಲ್ಲಿ ಶುಕ್ರವಾರ ನಡೆದಿದೆ.ದಾಸಾಮಂತಾಪುರದಲ್ಲಿ ನಡೆದ ದಸರಾ ಜಾತ್ರೆಗೆ ನೋಡಿ ತಮ್ಮ ಊರಿಗೆ ಮರುಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಎಸ್‌ಪಿ ಅನುಪ್ ಸಾಹು ತಿಳಿಸಿದ್ದಾರೆ.ಈ ಘಟನೆಯಲ್ಲಿ ಏಳು ಮಹಿಳೆಯರು ಸೇರಿದಂತೆ ಸ್ಥಳದಲ್ಲಿ 14 ಮಂದಿ ಸತ್ತರೆ, ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದು ಗಾಯಗೊಂಡಿರುವರನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry