ಕಂದಕಕ್ಕೆ ಬಿದ್ದಿದ್ದ ಗರ್ಭಿಣಿ ಆನೆ ರಕ್ಷಣೆ

7

ಕಂದಕಕ್ಕೆ ಬಿದ್ದಿದ್ದ ಗರ್ಭಿಣಿ ಆನೆ ರಕ್ಷಣೆ

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ಮತ್ತು ಅಗಸನಹುಂಡಿ ಸಮೀಪದ ಕಾಡಂಚಿನ ಆನೆ ಕಂದಕದಲ್ಲಿ ಬಿದ್ದಿದ್ದ ಗರ್ಭಿಣಿ ಆನೆಯನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಗುರುವಾರ ಯಶಸ್ವಿಯಾದರು.ಬುಧವಾರ ರಾತ್ರಿ ಏಳೆಂಟು ಆನೆಗಳು ಕಾಡಂಚಿನ ಗ್ರಾಮಗಳಲ್ಲಿ ಬೆಳೆದಿದ್ದ ರಾಗಿ, ಜೋಳ ಸೇರಿದಂತೆ ಇನ್ನಿತರೆ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿದವು. ನಂತರ ಕಾಡಿಗೆ ತೆರಳುವಾಗ ಗರ್ಭಿಣಿ ಆನೆ ಕಂದಕದಲ್ಲಿ ಸಿಲುಕಿಕೊಂಡು ಮೇಲೇಳು ಸಾಧ್ಯವಾಗದೆ ನರಳುತ್ತಿತ್ತು. ಇದನ್ನು ಗಮನಿಸಿದ ಗಾರ್ಡ್ ವೆಂಕಟೇಶ್, ಮೇಟಿಕುಪ್ಪೆ ಅರಣ್ಯ ವಲಯಾಧಿಕಾರಿ ಪೂವಯ್ಯನವರ ಮಾರ್ಗದರ್ಶನದಲ್ಲಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲು ಯಶಸ್ವಿಯಾದರು.ಕಾರ್ಯಾಚರಣೆಯಲ್ಲಿ ಮಲ್ಲಿಕಾರ್ಜುನ, ಮಂಜು, ಸಿದ್ದಾರೂಡ, ಶ್ರೀನಿವಾಸ್, ಸಾಕಯ್ಯ, ಮಂಜುನಾಥ್ ಮತ್ತು ನಂಜುಂಡಸ್ವಾಮಿ ಇದ್ದರು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ  ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry