ಕಂದಕಕ್ಕೆ ಸೂಕ್ತ ರಕ್ಷಣೆ ನೀಡಿ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕಂದಕಕ್ಕೆ ಸೂಕ್ತ ರಕ್ಷಣೆ ನೀಡಿ

Published:
Updated:

ಬಿಬಿಎಂಪಿ ಪ್ರಧಾನ ಕಚೇರಿಯಿಂದ ಮೆಜೆಸ್ಟಿಕ್ ಉದ್ದಗಲಕ್ಕೂ ಪಾದಚಾರಿ ರಸ್ತೆಯಲ್ಲಿ ಬೆಳೆಸಿದ ಮರಗಳ ಸುತ್ತಲೂ ಒಂದರಿಂದ ಒಂದೂವರೆ ಅಡಿ ಕಂದಕ ಅಗೆದಿರುತ್ತಾರೆ. ಆದರೆ ಈ ಕಂದಕಕ್ಕೆ ಸರಿಯಾದ ಸುರಕ್ಷತೆ ಮಾಡದೆ ಅವೈಜ್ಞಾನಿಕವಾಗಿ ನಿರ್ಮಿಸಿರುತ್ತಾರೆ.ಅಕ್ಕಪಕ್ಕದಲ್ಲಿ ಪುಸ್ತಕ ಅಂಗಡಿ, ಹಣ್ಣು, ಕೈಗಾಡಿ ಮತ್ತಿತರ ಅನೇಕ ವ್ಯಾಪಾರಸ್ಥರುಗಳು ಪಾದಚಾರಿ ಸ್ಥಳವನ್ನು ಆಕ್ರಮಿಸಿ ಕೊಂಡಿರುತ್ತಾರೆ. ಹೀಗಾಗಿ ಜನ ಪಾದಚಾರಿ ರಸ್ತೆಯಲ್ಲಿ ಸರಾಗವಾಗಿ ಓಡಾಡುವುದೇ ದುಸ್ತರವಾಗಿದೆ.ಪ್ರತಿ ಮರಗಳ ಸ್ಥಳದಲ್ಲಿ ಕಂದಕವನ್ನು ತೋಡಿದ್ದಾರೆ. ಅಲ್ಲಿ ಓಡಾಡುವ ಜನ ತಿಳಿಯದೆ ಕಂದಕಕ್ಕೆ ಬಿದ್ದು ಕೈಕಾಲು ಮತ್ತು ಮುಖ ಗಾಯ ಮಾಡಿಕೊಂಡಿರುತ್ತಾರೆ. ನಾನು ಈ ಪಾದಚಾರಿ ರಸ್ತೆಯಲ್ಲಿ ನಿತ್ಯವೂ ಓಡಾಡುತ್ತೇನೆ.ಇತ್ತೀಚೆಗೆ ಕೆಲವು ಅಂಧ ಸ್ನೇಹಿತರು ಈ ಕಂದಕದಲ್ಲಿ ಬಿದ್ದು ತಲೆಗೆ ಮತ್ತು ಕೈಕಾಲುಗಳಿಗೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದು ಕಣ್ಣಾರೆ ಕಂಡಿದ್ದೇನೆ. ಇದನ್ನು ನೋಡಿದ ಜನ ಬಿಬಿಎಂಪಿಯ ಈ ಮಹಾ ಸಾಧನೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಈ ಕಂದಕಕ್ಕೆ ಸೂಕ್ತ ಸೌಲಭ್ಯ ಒದಗಿಸಿ ಮುಂದೆ ಆಗಬಹುದಾದ ಭಾರಿ ಅನಾಹುತಕ್ಕೆ ಇತಿಶ್ರೀ ಹಾಡುವರೆಂದು ನಂಬೋಣವೇ?

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry