ಮಂಗಳವಾರ, ಮೇ 17, 2022
25 °C

ಕಂದನಿಗೂ ಸ್ಪರ್ಧೆಯ ಹಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಕಬ್ಬನಪೇಟೆ 5ನೇ ಅಡ್ಡರಸ್ತೆಯಲ್ಲಿರುವ ಶೆಮರಾಕ್ ಅಚೀವರ್ಸ್‌ ಶಾಲೆಯಲ್ಲಿ ಮುದ್ದುಮಕ್ಕಳ `ಬೇಬಿ ಟ್ಯಾಲೆಂಟ್ ಶೋ~ ಕಲರವ ಮಕ್ಕಳಲ್ಲಿ ಮಾತ್ರವಲ್ಲದೆ ಪಾಲಕರಲ್ಲೂ ಪುಳಕವನ್ನುಂಟು ಮಾಡಿತು.ಯಾಕೆಂದರೆ, ಅಲ್ಲಿದ್ದದ್ದು ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು.ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 150 ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ತೋರಿಸಿದರು. ಪ್ರತಿಭಾ ಪ್ರದರ್ಶನಕ್ಕಿಂತ ಮಕ್ಕಳ ಮುದ್ದು ನಗು, ತುಂಟನತ, ತೊದಲು ನುಡಿ ಎಲ್ಲರ ಗಮನ ಸೆಳೆದಿತ್ತು.`ಮೋಸ್ಟ್ ಆಕ್ಟಿವ್ ಬೇಬಿ~ (ಹೆಚ್ಚು ಚುರುಕಾದ ಮಗು), `ಬೆಸ್ಟ್ ಸ್ಮೈಲ್ ಬೇಬಿ~ (ಚೆಂದದ ನಗುವಿನ ಮಗು), `ಚಬ್ಬಿ ಚೀಕ್ಸ್ ಬೇಬಿ~ (ಆಕರ್ಷಕ ಕೆನ್ನೆಯ ಮಗು), `ಮೋಸ್ಟ್ ಫೋಟೋನಿಕ್ ಫೇಸ್ ಬೇಬಿ~ (ಶ್ರೇಷ್ಠ ಚಿತ್ರಮುಖಿ ಮಗು) ಸೇರಿದಂತೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.ದೆಹಲಿ ಮೂಲದ `ಶೆಮರಾಕ್ ಅಚೀವರ್ಸ್‌ ಶಾಲೆ~ ಬೆಂಗಳೂರಿನಲ್ಲಿ ಒಟ್ಟು ಎಂಟು ಶಾಖೆಗಳನ್ನು ಹೊಂದಿದ್ದು, ಮಕ್ಕಳಿಗೆ ಆಟದ ಜೊತೆ ಜೊತೆಗೆ ಪಾಠ, ಪಾಠದ ಜೊತೆ ಅವರಲ್ಲಿರುವ ವಿವಿಧ ಪ್ರತಿಭೆ, ಕೌಶಲಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ `ಬೇಬಿ ಟ್ಯಾಲೆಂಟ್ ಶೋ~ ಮಕ್ಕಳ ಪ್ರತಿಭೆಗೊಂದು ವೇದಿಕೆಯಾಗಿತ್ತು. ಮಾಹಿತಿಗಾಗಿ 99866 42435ನ್ನು ಸಂಪರ್ಕಿಸಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.