ಮಂಗಳವಾರ, ಏಪ್ರಿಲ್ 13, 2021
32 °C

ಕಂದಾಯ ದಾಖಲೆ ಗಣಕೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಇ ಆಡಳಿತ ಆಯುಕ್ತ ರಾಜೀವ್ ಚಾವ್ಲ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಕಂದಾಯ ದಾಖಲೆಗಳ ಗಣಕೀಕರಣ ಪ್ರಕ್ರಿಯೆಯನ್ನು ಗಮನಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಿ ಟ್ಟಿರುವ ಹಲವು ವರ್ಷದ ಕಂದಾಯ ದಾಖಲೆಗಳ ಜೋಡಣಾ ವಿಧಾನನ್ನು ಪರಿಶೀಲಿಸಿದ ಅವರು ಗಣಕೀರಣ ಕುರಿತು ಸಲಹೆ- ಸೂಚನೆ ನೀಡಿದರು.ರಾಜೀವ್ ಚಾವ್ಲ ಅವರ ಭೇಟಿ ಕುರಿತು ಪತ್ರ ಕರ್ತರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಚನ್ನಪ್ಪಗೌಡ ಅವರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಲವು ವರ್ಷದ ದಾಖಲೆಗಳನ್ನು ಗಣಕೀಕರಣಗೊಳಿಸುತ್ತಿರುವ ಕುರಿತು ಇ ಆಡಳಿತ ಆಯುಕ್ತರಾದ ರಾಜೀವ್‌ಚಾವ್ಲ ಅವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.ಹಳೆ ಕಡತಗಳನ್ನು ಗಣಕೀಕರಣಗೊಳಿಸಬೇಕೆಂಬ ಆದೇಶದ ಮೇರೆಗೆ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಕಡತಗಳನ್ನು ವ್ಯವಸ್ಥಿತವಾಗಿ ಗಣಕೀಕರಣಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಟ್ಟು 1,82,234 ಕಡತಗಳಿವೆ. ಅವುಗಳಲ್ಲಿ 67,627 ಕಡತಗಳನ್ನು ವಿಲೇವಾರಿ ಮಾಡಿ ಉಳಿದ 1,20,611 ಕಡತಗಳನ್ನು ಗಣಕೀಕರಣಗೊಳಿಸಲಾಗುವುದು. ಸ್ಕ್ಯಾನ್ ಮಾಡಿ ಗಣಕೀಕರಣಗೊಂಡ ನಂತರ, ಅಗತ್ಯವಿದ್ದರೆ ಅವುಗಳನ್ನು ಅರ್ಜಿದಾರರಿಗೆ ನೀಡಲಾಗುವುದು ಎಂದರು.ಐ.ಜಿ.ರಸ್ತೆ ವಿಸ್ತರಣೆ: ನಗರದ ಐ.ಜಿ.ರಸ್ತೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಸ್ತೆಯಲ್ಲಿ ಉತ್ತಮ ಗುಣಮಟ್ಟದ ಚರಂಡಿ ನಿರ್ಮಿಸಲಾಗುತ್ತಿದೆ. ಚರಂಡಿಗೆ ಅಳವಡಿಸುವ ಸ್ಲ್ಯಾಬ್‌ಗಳು ಸರಿಯಾದ ರೀತಿಯಲ್ಲಿ ಕ್ಯೂರ್ ಆಗದಿದ್ದರೆ, ಅವನ್ನು ಬದಲಿಸುವಂತೆ ಸಂಬಂ ಧಿಸಿದ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು.ರತ್ನಗಿರಿ ರಸ್ತೆ ವಿಸ್ತರಣೆ: ರತ್ನಗಿರಿ ರಸ್ತೆ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಈಗಾಗಲೇ ಶಾಸಕರ ಜತೆ ಚರ್ಚಿಸಲಾಗಿದೆ. ಮುಂದಿನ ವಾರ ಕಟ್ಟಡ ಮಾಲೀಕರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ನೀರಿನ ಸಮಸ್ಯೆ ಇಲ್ಲ:  ನಗರದ ಗೌರಿಕಾಲುವೆ, ಟಿಪ್ಪುನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಸಭೆಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಇಲ್ಲಿಯವರೆಗೆ ಯಾವು ದೇ ದೂರುಗಳು ಬಂದಿಲ್ಲವೆಂದು ಅವರು ತಿಳಿಸಿದರು.ಇದೇ 10ಕ್ಕೆ ಸಭೆ: ಬಾಬಾಬುಡನ್‌ಗಿರಿಯಲ್ಲಿ ಉರುಸ್ ನಡೆಸುವ ಕುರಿತು ಇದೇ 10ರಂದು ಸಭೆ ನಡೆಸಲಾಗುವುದು. ಮುಖಂಡರು ನೀಡುವ ಸಲಹೆ  ಪರಿಗಣಿಸಿ ಶಾಖಾದ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉರುಸ್ ಆಚರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಗುಹೆ ದುರಸ್ತಿ: ಇನಾಂ ದತ್ತಾತ್ರೇಯಪೀಠದ ಮೇಲ್ಛಾ ವಣಿ ದುರಸ್ತಿ ಕಾಮಗಾರಿ ಇದೇ 10ರಿಂದ ಪ್ರಾರಂಭವಾಗಲಿದ್ದು, ಮಳೆಗಾಲ ಆರಂಭವಾಗುವುದರ ಒಳಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.