ಕಂದಾಯ ಬಾಕಿ; 29 ಮನೆ ನಲ್ಲಿ ಸಂಪರ್ಕ ಕಡಿತ

7

ಕಂದಾಯ ಬಾಕಿ; 29 ಮನೆ ನಲ್ಲಿ ಸಂಪರ್ಕ ಕಡಿತ

Published:
Updated:
ಕಂದಾಯ ಬಾಕಿ; 29 ಮನೆ ನಲ್ಲಿ ಸಂಪರ್ಕ ಕಡಿತ

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಪಾವತಿಸದ 29 ಮನೆಗಳ ನಲ್ಲಿ ಸಂಪರ್ಕವನ್ನು ನಗರಸಭೆ ಸಿಬ್ಬಂದಿ ಶುಕ್ರವಾರ ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಿದರು.ಪೌರಾಯುಕ್ತ ಕೃಷ್ಣಮೂರ್ತಿ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಏ. 1ರ ನಂತರ ತೆರಿಗೆ ವಸೂಲಿ ಆಂದೋಲನದಲ್ಲಿ ಒಟ್ಟು ರೂ. 30 ಲಕ್ಷ  ತೆರಿಗೆ ವಸೂಲಿ ಮಾಡಲಾಗಿದೆ ಎಂದು ನಗರಸಭೆ ಎಂಜಿನಿಯರ್ ತೇಜಮೂರ್ತಿ ತಿಳಿಸಿದರು.ಕಳೆದ ಹಣಕಾಸು ವರ್ಷದ್ದೇ ಮನೆ ಕಂದಾಯ ರೂ. 30 ಲಕ್ಷ ಬಾಕಿ ಉಳಿದಿದೆ. ಈ ಬಾಕಿ ವಸೂಲಿಗೆ ಕಳೆದ 5 ದಿನಗಳಿಂದ ನಗರಸಭೆಯ 70ಕ್ಕೂ ಹೆಚ್ಚು ಸಿಬ್ಬಂದಿ ಮನೆ ಮನೆಗೆ ತೆರಳಿ ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ವಸೂಲಿಯನ್ನೂ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಕೆಲವರು 5ರಿಂದ 10 ವರ್ಷಗಳ ಕಾಲ ನೀರು ಮತ್ತು ಮನೆ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ.ಇಂಥವರ ಪೈಕಿ 29 ಮನೆಗಳ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ.ಕೆಲವು ಮನೆಗಳ ಒಳಚರಂಡಿ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಡಿ.ಕೆ.ನಿಂಗೇಗೌಡ, ತೆರಿಗೆ ಹಣದಿಂದಲೇ ನಗರದ ಅಭಿವೃದ್ಧಿ ಸಾಧ್ಯ. ನಗರದ ರಾಮನಹಳ್ಳಿ, ಗೌರಿಕಾಲುವೆ, ವಿಜಯಪುರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ತೆರಿಗೆ ವಸೂಲಿ ಕಾರ್ಯ ನಡೆಯುತ್ತಿದೆ ಎಂದರು.ಕಂದಾಯ ಅಧಿಕಾರಿ ಬಸವರಾಜು, ಲೆಕ್ಕಾಧಿಕಾರಿ ರಮೇಶ್, ರಾಜಸ್ವ ನಿರೀಕ್ಷಕ ಗುರುಮೂರ್ತಿ, ಎಂಜಿನಿಯರ್‌ಗಳಾದ ಮಿಥುನ, ಚಂದ್ರಶೇಖರ್, ರಶ್ಮಿ ಹಾಗೂ ಹಲವು ನಗರಸಭೆ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry