ಕಂದಾಯ ವಸೂಲಾತಿಗೆ ಕಠಿಣ ಕ್ರಮ

7

ಕಂದಾಯ ವಸೂಲಾತಿಗೆ ಕಠಿಣ ಕ್ರಮ

Published:
Updated:

ಹರಿಹರ: ‘ಸರ್ಕಾರದ ಆದೇಶದ ಅನ್ವಯ ಪ್ರತಿ ಸ್ಥಳೀಯ ಸಂಸ್ಥೆಗಳಿಗೂ ಕಂದಾಯ ಸಂಗ್ರಹ ಗುರಿ ನಿಗದಿಪಡಿಸಲಾಗುವುದು’ ಎಂದು ಜಿಲ್ಲಾ ಯೋಜನಾ ಅಧಿಕಾರಿ ಎಚ್.ಪಿ.ನಾಗರಾಜ್ ಹೇಳಿದರು.ನಗರಸಭೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರು ಕಂದಾಯ ವಸೂಲಿಗೆ ಕಡತ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದರು.ನಗರಸಭೆ ಕಂದಾಯ ವಸೂಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಇದೆ. ಇದನ್ನು ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ಆಸ್ತಿ ತೆರಿಗೆ ವಸೂಲಾತಿ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಬಾಕಿ ಹಾಗೂ ಪ್ರಸ್ತುತ ಸಾಲಿನ ಕಂದಾಯ ವಸೂಲಾತಿಯ ಗುರಿ ಮುಟ್ಟಬೇಕು.` 50 ಸಾವಿರಕ್ಕೂ ಹೆಚ್ಚು ಕಂದಾಯ ಬಾಕಿ ಉಳಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಗತ್ಯ ಬಿದ್ದರೆ, ಅಂಥವರ ಮನೆ ಮುಂದೆ ಟಾಂಟಾಂ ಹೊಡಿಸಿ ಕರ ವಸೂಲಾತಿ ಮಾಡಬೇಕು ಎಂದು ಸೂಚನೆ ನೀಡಿದರು.ಪ್ರಸ್ತುತ ಸಾಲಿನ ಜುಲೈ ಅಂತ್ಯದವರೆಗಿನ ಆಸ್ತಿ ತೆರಿಗೆ ವಸೂಲಾತಿಯ ವಿವರ ಪರಿಶೀಲಿಸಿದಾಗ ಜಿಲ್ಲೆಯಲ್ಲಿ ಕಂದಾಯ ವಸೂಲಾತಿ ಶೇ 40ಕ್ಕಿಂತ  ಕಡಿಮೆ ಇದೆ. ಜಿಲ್ಲಾ ಯೋಜನಾಧಿಕಾರಿ ಸ್ಥಳೀಯ ಸಂಸ್ಥೆ ಅಧಿಕಾರಿ ಪ್ರತಿ ತಿಂಗಳು ಕಂದಾಯ ಸಂಗ್ರಹಕ್ಕೆ ಗುರಿ ನಿಗದಿಪಡಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ ಎಂದು ತಿಳಿಸಿದರು.ನಗರಸಭೆಯ ಪೌರಾಯುಕ್ತ ಎಂ.ಕೆ.ನಲವಡಿ, ಎಇಇ ಕೆ.ಎಚ್.ಚಂದ್ರಶೇಖರ್, ಲೆಕ್ಕಾಧಿಕಾರಿ ವಾಣಿಶ್ರೀ, ಕಂದಾಯ ಅಧಿಕಾರಿ ಪ್ರಭಾಕರ್ ಪಾಟೀಲ್, ಕಂದಾಯ ನಿರೀಕ್ಷಕ ರಮೇಶ್, ಕರ ವಸೂಲಿ ಸಿಬ್ಬಂದಿ ಅಣ್ಣಪ್ಪ ಬೆಣ್ಣಿ, ಎಸ್.ಎಸ್.ಬಸವರಾಜ್, ಎಂ.ಗುರುನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry