ಕಂಧಮಲ್ ಗಲಭೆ: 13 ಮಂದಿಗೆ ಆರು ವರ್ಷ ಜೈಲು ಶಿಕ್ಷೆ

7

ಕಂಧಮಲ್ ಗಲಭೆ: 13 ಮಂದಿಗೆ ಆರು ವರ್ಷ ಜೈಲು ಶಿಕ್ಷೆ

Published:
Updated:

ಫೂಲ್‌ಬನಿ, ಒಡಿಶಾ (ಪಿಟಿಐ): ಕಂಧಮಲ್‌ನಲ್ಲಿ 2008ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ 13 ಮಂದಿಗೆ ತ್ವರಿತ ನ್ಯಾಯಾಲಯವು 6 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಸಾಕ್ಷ್ಯ ಕೊರತೆ ಕಾರಣದಿಂದ 6 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಪ್ರತಿಯೊಬ್ಬ ಅಪರಾಧಿಗೂ ರೂ 5,000 ದಂಡ ವಿಧಿಸಲಾಗಿದ್ದು, ತಪ್ಪಿದಲ್ಲಿ ಮತ್ತೆ 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry