ಮಂಗಳವಾರ, ಮೇ 11, 2021
24 °C

ಕಂಪನಿ ಮಸೂದೆಗೆ ಶೀಘ್ರ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಬಹು ನಿರೀಕ್ಷೆಯ ನೂತನ `ಕಂಪನಿಗಳ ಮಸೂದೆ~ ಪ್ರಸಕ್ತ ಸಂಸತ್ ಅಧಿವೇಶನದಲ್ಲಿಯೇ ಅಂಗೀಕಾರವಾಗಲಿದೆ ಎಂದು ಕೇಂದ್ರ ಕಂಪನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಸೋಮವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಐಸಿಎಸ್‌ಐ ಕ್ಯಾಪಿಟಲ್ ಮಾರ್ಕೆಟ್ಸ್‌ನ ಸಮಾರಂಭದಲ್ಲಿ ಮಾತನಾಡಿದ ಅವರು, ನೂತನ ಮಸೂದೆ ಜಾರಿಗೆ ಬಂದಲ್ಲಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಂಸ್ಥಿಕ ಆಡಳಿತಕ್ಕೆ ಬದ್ಧವಾಗಿರುವಂತೆ ಮಾಡುತ್ತದೆ. ಇ-ಆಡಳಿತ ಪರಿಕಲ್ಪನೆ, ಕಂಪನಿಗಳಲ್ಲಿ ಸೈದ್ಧಾಂತಿಕ ನಡವಳಿಕೆ ಒತ್ತಾಯಿಸುವ ಅಂಶವೂ ಇರುತ್ತದೆ ಎಂದರು.

`ರಾಷ್ಟ್ರೀಯ ಕಂಪನಿ ಆಡಳಿತ ನೀತಿ~ ಕರಡೂ ಅಂತಿಮ ಘಟ್ಟದಲ್ಲಿದ್ದು, ಮುಂದಿನ ಆರು ತಿಂಗಳೊಳಗೆ ಮಂಡನೆ ಆಗಲಿದೆ. ಈ ಹೊಸ ನೀತಿ ಅತ್ಯಂತ ಮಹತ್ವದ್ದು-ಗುಣಮಟ್ಟದ್ದು ಆಗಿರುವಂತೆ ಮಾಡುವ ಸಂಬಂಧ ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ)ದ ನೂತನ ಅಧ್ಯಕ್ಷ ಆದಿ ಗೋದ್ರೆಜ್ ಅವರ ನೇತೃತ್ವದಲ್ಲಿ ಸಮಿತಿಯನ್ನು ಕಂಪನಿ ವ್ಯವಹಾರಗಳ ಸಚಿವಾಲಯ ಕಳೆದ ವಾರವಷ್ಟೆ ರಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.