ಕಂಪೆನಿಗಳಿಗೆ ಶೀಘ್ರ ನೋಟಿಸ್‌

7
ಕಾಮನ್‌ವೆಲ್ತ್‌ ಕ್ರೀಡಾಕೂಟ ತೆರಿಗೆ ವಂಚನೆ

ಕಂಪೆನಿಗಳಿಗೆ ಶೀಘ್ರ ನೋಟಿಸ್‌

Published:
Updated:

ನವದೆಹಲಿ (ಪಿಟಿಐ): ಮೂರು ವರ್ಷ­ಗಳ ಹಿಂದೆ ಇಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಕಾಮಗಾರಿ ವೇಳೆ ಸೇವಾ ತೆರಿಗೆ ವಂಚಿಸಿದ ಆರೋಪಕ್ಕೆ ಗುರಿಯಾ­ಗಿರುವ ಕೆಲವು ಖಾಸಗಿ ಕಂಪೆನಿಗಳಿಗೆ ಹಣಕಾಸು ಸಚಿವಾಲಯವು ನೋಟಿಸ್‌ ಜಾರಿ ಮಾಡುವ

ಸಾಧ್ಯತೆ ಇದೆ.ಈ ಕುರಿತು ತನಿಖೆ ನಡೆಸಿದ ಕೇಂದ್ರ ಜಾಗೃತ ದಳವು (ಸಿವಿಸಿ), ಕಾಮನ್‌ವೆಲ್ತ್‌ ಕ್ರೀಡಾಕೂಟದ ಕಾಮಗಾರಿ ನಿರ್ವಹಿಸಿದ ಕೆಲವು ಕಂಪೆನಿಗಳು ತೆರಿಗೆ ವಂಚಿಸಿವೆ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕಾಗಿ ಸರ್ಕಾರದ 37 ಇಲಾಖೆಗಳು 13,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದಲ್ಲಿ 9000ಕ್ಕೂ ಹೆಚ್ಚು ಕಾಮಗಾರಿಗಳನ್ನು ನಡೆಸಿದ್ದವು.ಸಿವಿಸಿ ಲೆಕ್ಕಾಚಾರದ ಪ್ರಕಾರ ಈ ಕಾಮಗಾರಿಗಳ ಹೊಣೆ ಹೊತ್ತಿದ್ದ ವಿವಿಧ ಕಂಪೆನಿಗಳು 1,000 ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ವಂಚಿಸಿವೆ ಎನ್ನಲಾಗಿದೆ.ಈಗಾಗಲೇ 240 ಕೋಟಿ ರೂಪಾಯಿ ತೆರಿಗೆ ಪಾವತಿಸಲು ಸೂಚಿಸಿ ಕೆಲವು ನೋಟಿಸ್‌ಗಳು ಜಾರಿಯಾಗಿದ್ದು, 67.33 ಕೋಟಿ ರೂಪಾಯಿಗಳ ವಸೂಲಾತಿಯನ್ನೂ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಕಾರ್ಮಿಕ ಇಲಾಖೆಯು ವಿವಿಧ ಇಲಾಖೆಗಳಿಂದ ಕಾರ್ಮಿಕರ ಕಲ್ಯಾಣ ತೆರಿಗೆ ಬಾಬ್ತು 41.80 ಕೋಟಿ ರೂಪಾಯಿಗಳನ್ನು ವಸೂಲು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry