ಕಂಪೆನಿ ವಿಲೀನ ರೂ 2ಲಕ್ಷ ಕೋಟಿ ವಹಿವಾಟು

7

ಕಂಪೆನಿ ವಿಲೀನ ರೂ 2ಲಕ್ಷ ಕೋಟಿ ವಹಿವಾಟು

Published:
Updated:

ನವದೆಹಲಿ(ಪಿಟಿಐ): ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ತಿರತೆಯ ಸಮಸ್ಯೆ ಇದ್ದರೂ, ಭಾರತದ ಉದ್ಯಮ ವಲಯದಲ್ಲಿ ಕಂಪೆನಿಗಳ ಖರೀದಿ ಮತ್ತು ವಿಲೀನ ಪ್ರಕ್ರಿಯೆ 2012ರಲ್ಲಿ ಜೋರಾಗಿಯೇ ನಡೆದಿದೆ.ಜನವರಿಯಿಂದ ಡಿಸೆಂಬರ್ 15ರವರೆಗಿನ ಹನ್ನೊಂದೂವರೆ ತಿಂಗಳ ಅವಧಿಯಲ್ಲಿ ಒಟ್ಟು ರೂ. 2 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಕಂಪೆನಿಗಳ ಸ್ವಾಧೀನ-ವಿಲೀನ ವಹಿವಾಟು ನಡೆದಿದೆ.ಉದ್ಯಮ ವಲಯ ಕ್ಷಿಪ್ರಗತಿ ಪ್ರಗತಿಗಾಗಿ ಕಂಡುಕೊಂಡಿರುವ ಈ `ವಿಲೀನ-ಸ್ವಾಧೀನ' ಸೂತ್ರವು 2011ಕ್ಕೆ ಹೋಲಿಸಿದಲ್ಲಿ 2012ರಲ್ಲಿ ಚುರುಕು ಪಡೆದಿತ್ತು. ಈ ವರ್ಷದಲ್ಲಿ ಈವರೆಗೆ ಒಟ್ಟು 582 ಕಂಪೆನಿಗಳ ಸ್ವಾಧೀನ-ವಿಲೀನ ಪ್ರಕ್ರಿಯೆ ದಾಖಲಾಗಿದೆ.ಟಾಟಾ ಸಮೂಹ, ಮಹೀಂದ್ರಾ, ಹಿಂದುಜಾ, ಆದಿತ್ಯ ಬಿರ್ಲಾ ಮೊದಲಾದ ಸಮೂಹಗಳು 2012ರಲ್ಲಿ ಈ ಪ್ರಕ್ರಿಯೆಯನ್ನು ದೊಡ್ಡ ಮಟ್ಟದಲ್ಲಿಯೇ ನಡೆಸಿದವು.ಹೊಸ ವರ್ಷ 2013ರಲ್ಲಿಯೂ ಭಾರತದಲ್ಲಿನ ವಿವಿಧ ಬೃಹತ್ ಕಂಪೆನಿ ಸಮೂಹಗಳು ಸಾಮ್ರಾಜ್ಯ ವಿಸ್ತರಣೆಯ ಈ ಪ್ರಕ್ರಿಯೆ ಯನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿಯೇ ಮುಂದುವರಿಸುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry